ದೊಡ್ಡಬಳ್ಳಾಪುರ,(31): 2022ನೇ ರಾಜ್ಯೋತ್ಸವ ಪ್ರಶಸ್ತಿಗಳ ಪಟ್ಟಿಯು ಸೋಮವಾರ ಅಂತಿಮಗೊಂಡಿದೆ..

ಹರಿತಲೇಖನಿಗೆ ದೊರೆತಿರುವ ಅಧಿಕೃತ ಪಟ್ಟಿ ಅನ್ವಯ, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ತಾಲೂಕಿನ ಎಂಟು ವ್ಯಕ್ತಿಗಳನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಡಾ.ವೆಂಕಟರೆಡ್ಡಿ “ಕಟ್ಟಾಳು” – ಡಿ.ಪಿ.ಆಂಜನೇಯ, ನ್ಯಾಯವಾದಿ, ಪ್ರಗತಿಪರ ರೈತ – ರಾ.ಬೈರೇಗೌಡ, ನಾಟಕ – ಕೆ.ನರಸಿಂಹಯ್ಯ , ರಂಗಭೂಮಿ – ಆರ್.ರಾಜಣ್ಣ, ಕನ್ನಡ ಪರ ಹೋರಾಟಗಾರ – ಹನುಮಂತರೆಡ್ಡಿ, ವೈದ್ಯಕೀಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ – ಡಾ.ಹರೀಶ್ (ಅಭಿಷೇಕ್ ನೇತ್ರಧಾಮ), ಸಾಹಿತ್ಯ ಚಿನ್ನು ಪ್ರಕಾಶ್, ಯಕ್ಷಗಾನ ಕಲೆ – ಎನ್ ರಾಮಮೂರ್ತಿ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಕಳೆದ ವರ್ಷ ಕೋವಿಡ್ ಕಾರಣ ತಡೆಹಿಡಿಯಲಾಗಿದ್ದ ಪಟ್ಟಿಯನ್ನೆ ಈ ವರ್ಷವೂ ಮುಂದುವರೆಸಿದ್ದು, ಹೆಚ್ಚುವರಿಯಾಗಿ ಇಬ್ಬರನ್ನು ಸೇರಿಸಲಾಗಿದೆ ಎನ್ನಲಾಗಿದೆ.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಮಂಗಳವಾರ ನಗರದ ಡಾ.ರಾಜ್‍ಕುಮಾರ್ ಕಲಾಮಂದಿರದಲ್ಲಿ ನಡೆಯುವ ಕನ್ನಡ ರಾಜ್ಯೋತ್ವದಲ್ಲಿ, ಆಯ್ಕೆಯಾಗಿರುವ ಗಣ್ಯರಿಗೆ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
