ವಿವಾಹ ಸಮಾರಂಭ ನಡೆಯುತ್ತಿತ್ತು. ಪ್ರವರ ಮುಗಿದಮೇಲೆ ಪುರೋಹಿತರು ವೇದಿಕೆಯ ಮೇಲೆ ನಿಂತು ದೊಡ್ಡ ದನಿಯಲ್ಲಿ, “ಈ ವಿವಾಹಕ್ಕೆ ಯಾರದಾದರೂ ಆಕ್ಷೇಪಣೆ ಇದ್ದರೆ, ಮುಂದೆ ಬನ್ನಿ. ಮದುವೆಯಾದ ಮೇಲೆ ಗಂಡ ಹೆಂಡತಿ ನಡುವೆ ಜಗಳ ಬೇಡ. ಈಗಿನ ಕಾಲದಲ್ಲಿ ಸಣ್ಣಪುಟ್ಟ ವಿಷಯಗಳಿಗೂ ಡೈವೋರ್ಸ್ ಆಗುತ್ತವೆ. ಇಬ್ಬರ ಜೀವನವೂ ಹಾಳು. ಹಾಗಾಗುವುದು ಬೇಡ. ಈ ಮದುವೆಗೆ ಯಾರದ್ದಾದರೂ ಏನಾದರೂ ತಕರಾರು ಇದ್ದರೆ ಹೇಳಿ.” ಎಂದು ಹೇಳಿ ಸುಮ್ಮನಾದರು.
ಕಿಕ್ಕಿರಿದು ತುಂಬಿದ್ದ ಮದುವೆ ಮಂಟಪದಲ್ಲಿ ಹಿಂದೆ ನಿಂತಿದ್ದ ಸುಂದರ ಯುವತಿಯೊರ್ವಳು ಮಡಿಲಲ್ಲಿ ಒಂದು ಮಗುವಿನೊಂದಿಗೆ ಮುಂದೆ ಬಂದಳು.
ನೆರೆದಿದ್ದ ಆಹ್ವಾನಿತರು ಮುಖ ಮುಖ ನೋಡಿಕೊಂಡರು, ಗುಸುಗುಸು ಪಿಸುಪಿಸು ಶುರುವಾಯ್ತು. ಎಲ್ಲರ ಸಂಶಯ ನೋಟ ವರನ ಮೇಲೆ ಬಿತ್ತು.
ಗುಂಪಿನಲ್ಲಿ ಕೆಲವರು ಮುಸಿಮುಸಿ ನಕ್ಕರು.
ಹಸೆಮಣೆಯ ಮೇಲಿದ್ದ ವಧು ಅಲ್ಲೇ ವರನಿಗೆ ಸಿಟ್ಟಿನಿಂದ ಕಪಾಳಕ್ಕೆ ಬಿಗಿದಳು. ವಧುವಿನ ತಂದೆ ಬಂದೂಕು ತರಲು ಫಿಲ್ಮ್ ಸ್ಟೈಲ್ ನಲ್ಲಿ ಧಾವಿಸಿದರು. ವಧುವಿನ ಇಬ್ಬರು ಅಣ್ಣಂದಿರು ವರನನ್ನು ಹಿಡಿದು ಹಿಗ್ಗಾಮುಗ್ಗಾ ಬಾರಿಸಿದರು. ಇವೆಲ್ಲವನ್ನೂ ನೋಡಿ ವಧುವಿನ ತಾಯಿ ಪ್ರಜ್ಞೆ ತಪ್ಪಿ ಬಿದ್ದರು.
ಮದುವೆ ಮಂಟಪದಲ್ಲಿ ಸ್ಮಶಾನ ಮೌನ, ಭಯ, ಆತಂಕ ಮೂಡಿತು.
ಪುರೋಹಿತರು ಆ ಯುವತಿಯನ್ನು ಕೇಳಿದರು, “ಏನಮ್ಮಾ, ಮದುವೆಯಿಂದ ನಿನಗೆ ಏನು ಸಮಸ್ಯೆ ಇದೆ?”
ಆ ಯುವತಿ ಹೇಳಿದಳು, “ಇಲ್ಲ, ನಿಮ್ಮ ಮಾತು ಹಿಂದೆ ನಿಂತಿದ್ದ ನನಗೆ ಸರಿಯಾಗಿ ಕೇಳಿಸ್ತಿರಲಿಲ್ಲ ಅದಕ್ಕೇ ಮುಂದೆ ಬಂದೆ”.
ಸುಲಗ್ನಾ ಸಾವಧಾನ!!
ಕೃಪೆ: ಮುಖಪುಟದ. ಸಂಗ್ರಹ ವರದಿ: ನರಸಿಂಹಮೂರ್ತಿ ಬರಗೂರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

