
ದೊಡ್ಡಬಳ್ಳಾಪುರ, (ನ,13): ಸಣ್ಣ ಪುಟ್ಟ ವಿಷಯಕ್ಕೆ ಜಗಳವಾಡಿ ಗಂಡ ಹೆಂಡತಿ ಒಂದೊಂದು ಕಡೆಯಾಗಿದ್ದರೆ ಮಕ್ಕಳು ಮತ್ತೊಂದು ಕಡೆ ಉಳಿದಿದ್ದರು. ಅಂತಹ ಪ್ರಕರಣಗಳನ್ನ ಸುಖಾಂತ್ಯ ಮಾಡುವ ಮೂಲಕ ಜಿಲ್ಲಾ ನ್ಯಾಯಾಲಯವು ಬೇರಾಗಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಿದೆ.

ಶನಿವಾರ ನಗರದ ನಾಲ್ಕನೆ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರಾದ ರಮೇಶ್ ದುರುಗಪ್ಪ ಏಕಬೋಟೆ, ಅರವಿಂದ ಸಾಯಿ ಬಣ್ಣ ಹಾಗಾರಗಿ, ಶಿಲ್ಪ.ಬಿ., ಪ್ರೇಮ್ ಕುಮಾರ್, ಸುಷ್ಮ.ಎಂ. ಅವರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನ ನ್ಯಾಯಾಲಯದಲ್ಲಿ ಒಟ್ಟು 1297 ರಾಜಿ ಸಂಧಾನ ಮಾಡುವುಲ್ಲಿ ಯಶಸ್ವಿಯಾಗಿದೆ.

ಗಂಡ ಹೆಂಡತಿಯನ್ನ ಕರೆಸಿ ಅವರ ಜೊತೆ ಮಾತುಕತೆ ನಡೆಸಿದ ನ್ಯಾಯಾಧೀಶರು ಅವರಿಗೆ ತಿಳಿ ಹೇಳುವ ಕಾರ್ಯವನ್ನ ಮಾಡಿದರು. ಗಂಡನಿಂದ ದೂರ ಉಳಿದಿದ್ದ ಹೆಂಡತಿ ಮಕ್ಕಳನ್ನ ಕರೆಸಿ ಅವರ ಎದುರಲ್ಲೇ ಇಬ್ಬರಿಗೂ ತಿಳುವಳಿಕೆ ಹೇಳಲಾಯಿತು. ಒಂದಾದ ದಂಪತಿಗಳು ಖುಷಿ ಖುಷಿಯಿಂದಲೇ ನಾವು ಮತ್ತೆ ಯಾವತ್ತೂ ಜಗಳ ಆಡದಂತೆ ಜೀವನ ಸಾಗಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಅದಾಲತ್ ನಲ್ಲಿ ಪ್ರಮುಖವಾಗಿ 24 ಸಿವಿಲ್ ದಾವೆಗಳು, 50 ಚೆಕ್ ಬೌನ್ಸ್ ದಾವೆಗಳು, ಅಲ್ಲದೆ ವಿಶೇಷವಾಗಿ ಜನನ ಪ್ರಮಾಣ ಪತ್ರ ಪಡೆಯಲು ವಿಫಲರಾಗಿದ್ದ 50 ಮಕ್ಕಳಿಗೆ ಜನನ ಪ್ರಮಾಣ ಪತ್ರವನ್ನು ಲೋಕ ಅದಾಲತ್ನಲ್ಲಿ ವಿತರಿಸಲಾಗಿದೆ.
ಈ ವೇಳೆ ಹಿರಿಯ ನ್ಯಾಯವಾದಿಗಳು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
