ದೊಡ್ಡಬಳ್ಳಾಪುರ ತಾಲೂಕಿನ ಕೊಂಡಸಂದ್ರ ಗ್ರಾಮದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕೊನೆ ಕಾರ್ತಿಕ ಸೋಮವಾರ ಪ್ರಯುಕ್ತ ಭಕ್ತಾದಿಗಳಿಂದ ಲಕ್ಷ ದೀಪೋತ್ಸವ ನೆರವೇರಿತು.
ಮುಂಜಾನೆ ಮಹಾರುದ್ರಾಭಿಷೇಕ ವಿಶೇಷ ಪೂಜೆ ಅಲಂಕಾರಗಳೊಂದಿಗೆ ಪ್ರಾರಂಭವಾದ ಕಾರ್ಯಕ್ರಮಗಳು ಸಂಜೆ ಲಕ್ಷದೀಪೋತ್ಸವ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತೆರೆಕಂಡಿತು.
ಹಿಂದೂಗಳಿಗೆ ಕಾರ್ತಿಕಮಾಸ ಶ್ರೇಷ್ಠ ಮಾಸ ಅದರಲ್ಲೂ ಕಾರ್ತಿಕ ಸೋಮವಾರ ಗಳಿಗೆ ವಿಶೇಷ ಮಹತ್ವವಿದೆ. ಆದ್ದರಿಂದ ಕಾರ್ತಿಕ ಸೋಮವಾರದಿಂದ ಬೆಳಗ್ಗಿನಿಂದ ಉಪವಾಸವಿದ್ದು ಸಂಜೆ ಶಿವ ದರ್ಶನ ಪಡೆದು ಲಕ್ಷದೀಪೋತ್ಸವದಲ್ಲಿ ಪಾಲ್ಗೊಳ್ಳುವುದು ಮೂಲಕ ಸುತ್ತಮುತ್ತಲಿನ ಗ್ರಾಮಸ್ಥರು ಸಂಪನ್ನಗೊಂಡರು.
ವರದಿ: ಉದಯ್ ಆರಾಧ್ಯ, ತೂಬಗೆರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

