ದಕ್ಷಿಣಕಾಶಿ ಎಂದು ಪ್ರಸಿದ್ಧವಾದ ಹರಿಹರ ಕ್ಷೇತ್ರವು ಹರಿಹರರ ಸಂಗಮದಿಂದ ಪುನೀತವಾಗಿದೆ ಇದು ದಾವಣಗೆರೆ ಜಿಲ್ಲೆಯ ತುಂಗಭದ್ರಾ ನದಿಯ ದಂಡೆಯ ಮೇಲೆ ಇದೆ.

ಬಹು ಹಿಂದೆ ಹರಿಹರ ಪಟ್ಟಣವು ಗುಹಾರಣ್ಯ ಎಂದು ಪ್ರಸಿದ್ಧವಾಗಿತ್ತು, ಇಲ್ಲಿಯ ಸ್ಥಳ ಪುರಾಣ ಗುಹಾಸುರ ಎಂಬ ರಾಕ್ಷಸನ ವಧೆಗಾಗಿ ಶ್ರೀಹರಿ (ವಿಷ್ಣು), ಶ್ರೀಹರ (ಶಿವನು),ಜೊತೆಗೂಡಿ, ಒಂದೇ ಆಗಿ ಹರಿಹರ ಎಂಬ ಮೂರ್ತಿಯಾಗಿ ಅವತರಿಸಿ ಆ ರಾಕ್ಷಸನನ್ನು ಸಂಹರಿಸಿದರು ಎಂಬುದು ಪುರಾಣ.

ಇಲ್ಲಿ ಶಿವ ವಿಷ್ಣುವೂ ಒಂದೇ ಮೂರ್ತಿಯಾಗಿ ನೆಲೆನಿಂತಿದ್ದಾರೆ. ಈ ಕ್ಷೇತ್ರವು ಅದ್ವೈತವನ್ನು ಹೇಳುತ್ತದೆ, ಇರುವುದು ಒಂದೇ ಬ್ರಹ್ಮವಸ್ತು ಎರಡೆನೇಯ ವಸ್ತು ಇಲ್ಲ.
ಹಾಗೆಯೇ ಇರುವುದು ಒಬ್ಬನೇ ಪರಮಾತ್ಮ ಅದು ಹರಿಹರೇಶ್ವರ ಸ್ವಾಮಿಯೇ ಎಂದು.
ಶ್ರೀ ಹರಿಹರೇಶ್ವರ ಸ್ವಾಮಿಗೆ, ರುದ್ರಾಭಿಷೇಕ, ಪುರುಷಸೂಕ್ತದಿಂದ ಅಭಿಷೇಕ, ಮಹಾಶಿವರಾತ್ರಿ, ವೈಕುಂಠ ಏಕಾದಶಿ ಮುಂತಾದ ಸೇವೆಗಳು ನಡೆಯುತ್ತವೆ.
ಮತ್ತು ಶ್ರೀ ಸ್ವಾಮಿಗೆ ಪ್ರತಿ ವರ್ಷ ಮಹಾರಥೋತ್ಸವದಲ್ಲಿ, ಭಕ್ತಾದಿಗಳು, ಹರ ಹರ ಮಹಾದೇವ, ಗೋವಿಂದ, ಗೋವಿಂದ ಎಂಬ ನಾಮಘೋಷಣೆಯೊಂದಿಗೆ ಸಂಭ್ರಮದಿಂದ ರಥವನ್ನು ಎಳೆಯುತ್ತಾರೆ.
ಸಂಗ್ರಹ ವರದಿ: ಗಣೇಶ್.ಎಸ್., ದೊಡ್ಡಬಳ್ಳಾಪುರ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
