ದೊಡ್ಡಬಳ್ಳಾಪುರ, (ನ.23): ವಿ.ವೆಂಕಟೇಶ್ ರಾಜೀನಾಮೆಯಿಂದ ತೆರವಾಗಿದ್ದ, ತಾಲೂಕಿನ ಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಸಿ.ಆನಂದ್ ವಿಜೇತರಾಗಿದ್ದಾರೆ.

24 ಸದಸ್ಯತ್ವ ಬಲದ ಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ, ಚುನಾವಣಾಧಿಕಾರಿ ಕೃಷಿ ಇಲಾಖೆಯ ಎಡಿಎ ಡಿ.ರಾಜೇಶ್ವರಿ, ಪಿಡಿಒ ನಾಗರಾಜ್ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ಅಧ್ಯಕ್ಷ ಸ್ಥಾನದ ಚುನಾವಣೆಗೆ ಕೆ.ಸಿ.ಆನಂದ್, ಮುನಿರಾಜು (ಬೇಜಾರು) ನಾಮಪತ್ರ ಸಲ್ಲಿಸಿದ್ದು, ಕೆ.ಸಿ.ಆನಂದ್ 14 ಮತ, ಮುನಿರಾಜು 10ಮತಗಳನ್ನು ಪಡೆದರು.
ಈ ವೇಳೆ 14 ಮತಗಳನ್ನು ಪಡೆದ ಕೆ.ಸಿ.ಆನಂದ್ ಅವರನ್ನು ವಿಜೇತರೆಂದು ಘೋಷಿಸಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
