ದೊಡ್ಡಬಳ್ಳಾಪುರ, (ನ.26): ತಾಲೂಕಿನ ಹೊಸಹಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್’ನಲ್ಲಿ ಕಳ್ಳತನ ನಡೆದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಹೊಸಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಕಬ್ಬಿಣದ ಬಾಗಿಲನ್ನು ಕುಯ್ದಿರುವ ಕಳ್ಳರು, ಕಳ್ಳತನ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಹೊಸಹಳ್ಳಿ ಠಾಣೆ ಪೊಲೀಸರು ದೌಡಾಯಿಸಿದ್ದು, ತಿಂಗಳ ಕೊನೆಯ ಶನಿವಾರ ಬ್ಯಾಂಕ್ ರಜೆಯಾದ ಕಾರಣ ಸಿಬ್ಬಂದಿಗಳು ಬ್ಯಾಂಕಿಗೆ ಬಂದಿಲ್ಲ. ಈ ಹಿನ್ನಲೆಯಲ್ಲಿ ಸಿಬ್ಬಂದಿಗಳು ಬರುವವರೆಗೂ ಕಾದು ನಿಲ್ಲುವಂತಾಗಿದೆ.
ಕೊನೆಯ ಶನಿವಾರ ಬ್ಯಾಂಕ್ ರಜೆಯಿರುವ ವಿಷಯ ತಿಳಿದೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಬ್ಯಾಂಕಿನಲ್ಲಿ ಕಳುವಾಗಿರುವ ವಸ್ತುಗಳ ಮಾಹಿತಿ ತಿಳಿದು ಬಂದಿಲ್ಲ. ಬ್ಯಾಂಕ್ ಸಿಬ್ಬಂದಿ ಬಂದ ನಂತರ ಬ್ಯಾಂಕಿನಲ್ಲಿದ್ದ ವಸ್ತುಗಳು ಕಳುವಾಗಿದೆಯೇ ಅಥವಾ ಕಳ್ಳತನದ ಯತ್ನ ನಡೆದಿದೆಯೇ ಎಂಬುದು ತಿಳಿದು ಬರಬೇಕಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

