ದೊಡ್ಡಬಳ್ಳಾಪುರ, (ನ.29): ಮಂಗಳವಾರ ಪಂಚರತ್ನ ರಥಯಾತ್ರೆ ತಾಲೂಕಿನ ರಾಜಘಟ್ಟಕ್ಕೆ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಬಂದಿದ್ದು, ಈ ವೇಳೆ ತೂಬಗೆರೆಗೆ ಬರಬೇಕೆಂದು ವಾಹನವನ್ನು ತಡೆದ ಜೆಡಿಎಸ್ ಕಾರ್ಯಕರ್ತರು ಒತ್ತಾಯಿಸಿದರು.

ಈ ವೇಳೆ ಕುಮಾರಸ್ವಾಮಿ ಗರಂ ಆಗಿದ್ದು, ನಾನು ಮನುಷ್ಯ, ಸೋಮವಾರ ರಾತ್ರಿ ಎರಡು ಗಂಟೆಗೆ ಊಟ ಮಾಡಿ, ಮತ್ತೆ ಕಾರ್ಯಕ್ರಮ ಮುಂದುವರಿಸಿದ್ದೇನೆ. ಇಂದು ದೊಡ್ಡಬಳ್ಳಾಪುರದಲ್ಲಿ ರಥಯಾತ್ರೆ ದಿನಾಂಕ ನಿಗದಿಯಾಗಿದೆ. ತೂಬಗೆರೆಗೆ ದಿನಾಂಕ ಕೊಟ್ಟವರು ಯಾರು, ಏನ್ ದನ ಕಾಯ್ತಿರಾ..? ತೂಬಗೆರೆಗೆ ಡೇಟ್ ಕೊಟ್ಟವರು ಯಾರು ಎಂದು ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ, ಹಿರಿಯ ಮುಖಂಡ ನರಸಿಂಹಯ್ಯ, ಮುಖಂಡರಾದ ಅಪ್ಪಯ್ಯಣ್ಣ, ಟಿ.ಆನಂದ್, ಹರೀಶ್ ಗೌಡ, ಕುಮಾರಸ್ವಾಮಿ ಅವರನ್ನು ಸಮಾಧಾನಗೊಳಿಸಲು ಮುಂದಾದರು.
ನಂತರ ಸ್ಥಳೀಯ ಮುಖಂಡರು ಕಾರ್ಯಕರ್ತರನ್ನು ರಥಕ್ಕೆ ಅಡ್ಡಿ ಮಾಡದಂತೆ ರಸ್ತೆ ಬದಿಗೆ ಕರೆತಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
