ದೊಡ್ಡಬಳ್ಳಾಪುರ, (ನ.29): ಪಂಚರತ್ನ ಯಾತ್ರೆಗೆ ಜೊತೆಯಾದ ನಿಖಿಲ್ ಕಂಟನಕುಂಟೆ ಗ್ರಾಮಕ್ಕೆ ಬಂದ ಪಂಚರತ್ನ ಯಾತ್ರೆಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜೊತೆಯಾದರು.

ಈ ವೇಳೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಪ್ರಬಲವಾಗಿದ್ದು, ದೊಡ್ಡಬಳ್ಳಾಪುರ ತಾಲೂಕಿಗೆ ಅಭ್ಯರ್ಥಿ ಅಂತಿಮಗೊಳಿಸಬೇಕಿದೆ. ರೈತರ ಆತ್ಮಹತ್ಯೆ ಹೆಚ್ಚಿದಾಗ ಮನೆಗಳಿಗೆ ಭೇಟಿ ಕೊಟ್ಟು ಸಾಂತ್ವನ ಹೇಳಿದ್ದು ಕುಮಾರಣ್ಣ. ಜೊತೆಗೆ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದರು. ಅದರಂತೆ ಸರ್ಕಾರ ಬಂದಾಗ ಸಾಲ ಮನ್ನಾ ಮಾಡಿ ಮಾತು ಉಳಿಸಿಕೊಂಡರು. ರೈತರು ಮತ್ತೆ ಸಾಲ ಮಾಡುವ ಪರಿಸ್ಥಿತಿಯಲ್ಲಿದ್ದಾರೆ. ಅಂತಹ ಸ್ಥಿತಿ ಬಾರದಿರಲಿ ಎಂದು ಈ ಕಾರ್ಯಕ್ರಮ ರೂಪಿಸಲಾಗಿದೆ.

ಯುವಕರು ನಿರುದ್ಯೋಗಿಗಳಾಗಿದ್ದು, ಅವರಿಗೆ ಉದ್ಯೋಗ ಕೊಡಿಸುವ ಯೋಜನೆ ರೂಪಿಸಲಾಗಿದೆ. ದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿವೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದೇಶದಲ್ಲಿ ಬಡತನ ಹಾಗೆಯೇ ಇದೆ. ದೇವೇಗೌಡರು ಒಂದು ಬಾರಿ ಸಿಎಂ ಹಾಗೂ ಒಂದು ಬಾರಿ ಪ್ರಧಾನಿ ಆಗಿದ್ದರು. ಇದ್ದ ಅಲ್ಪ ಕಾಲದಲ್ಲಿಯೇ ಅನೇಕ ಯೋಜನೆ ಜಾರಿಗೆ ತಂದರು. ಕುಮಾರಣ್ಣನ ಕೈ ಬಲಡಿಸೋ ಕೆಲಸ ನೀವು ಮಾಡಬೇಕು. ಐದಕ್ಕೆ ಐದೂ ಯೋಜನೆ ಜಾರಿಗೆ ತರಲಾಗುವುದು. ದಯಮಾಡಿ ಕುಮಾರಣ್ಣನ ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ಕಂಟನಕುಂಟೆಯಿಂದ ನಿಖಿಲ್ ಯಾತ್ರೆ ಹೊಸಹಳ್ಳಿ, ಆರೂಢಿ, ಸಾಸಲು ಮೂಲಕ ಹುಲಿಕುಂಟೆಗೆ ಮತ್ತತರ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದು, ಅಭಿಮಾನಗಳು ಬೃಹತ್ ಕ್ಯಾಪ್ಸಿಕಂ ಹಾರ, ಜೋಳದ ಹಾರವನ್ನು ಅರ್ಪಿಸಿದ್ದಲ್ಲಿ, ಜೆಸಿಬಿ ಮೂಲಕ ಹೂವಿನ ಸುರಿಮಳೆಗೈದರು.
ಈ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್, ಶಾಸಕ ಸಾ.ರಾ.ಮಹೇಶ್ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
