ಹರಿತಲೇಖನಿ ದಿನಕ್ಕೊಂದು ಕಥೆ: ಸಂತ ತುಕಾರಾಮ

‘ದೇಹು’ ಎಂಬ ಊರಿನಲ್ಲಿ ವಾಸಿಸುತ್ತಿದ್ದ  ಸಂತ ತುಕಾರಾಮರು ಪಾಂಡುರಂಗನ  ಪರಮಭಕ್ತರು. ಜನರ ಮೇಲೆ ಅಪಾರ ಕರುಣೆ ಉಳ್ಳವರು. ದೊಡ್ಡ  ವಿದ್ವಾಂಸರು .ಭಕ್ತಿ ,ಶ್ರದ್ಧೆ ಕುರಿತು ಬಹಳ ಆಳವಾಗಿ ಅರಿತಿದ್ದರು. ಅಂಥ ಮಹಾಮಹಿಮರಾದ ಸಂತ ತುಕಾರಾಮರ ಕುರಿತಾದ ಪುಟ್ಟ ಕಥೆ.

ಒಂದು ದಿನ ತುಕಾರಾಮ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಅದೇ ಊರಿನ ‘ಸಾಲೋ ಮಾಲಾ’ ಎಂಬ ಹರಿ ಕೀರ್ತನಕಾರ ಎದುರಿಗೆ ಬರುತ್ತಿದ್ದ. ಆತನಿಗೆ ತುಕಾರಾಮರನ್ನು ಕೆಣಕ ಬೇಕೆನಿಸಿತು. ಏನು ತುಕಾರಾಮ್ಜೀ ನಿಮ್ಮ ಸಂಸಾರವನ್ನೇ ಹಾಳು ಮಾಡಿದ್ದೀರಿ, ಭೂಮಿಗೆ ಭಾರ ಕೂಳಿಗೆ ದಂಡ ಎನ್ನುವಂತಾಗಿ ಬಿಟ್ಟಿರಿ, ಹೆಂಡತಿ ಮಕ್ಕಳ ಕೈಗೆ ಚಿಪ್ಪು ಕೊಟ್ಟು ಈಗ ದೊಡ್ಡದಾಗಿ ಸಂತನ ಹಾಗೆ ವೇಷಹಾಕಿಕೊಂಡು ಎಲ್ಲಿಗೆ ಹೊರಟಿದ್ದೀರಿ? ಎಂದು ಮನಸ್ಸಿಗೆ ಚುಚ್ಚಿದಂತೆ ಕೇಳಿದನು.

ಇಷ್ಟೆಲ್ಲ ಮಾತುಗಳನ್ನು ಕೇಳಿ ತುಕಾರಾಮರು  ಸ್ವಲ್ಪವೂ ಕೋಪಗೊಳ್ಳದೆ ಹೀಗೆ ಕೆಲಸ ಹುಡುಕಲು  ಹೊರಟಿದ್ದೀನಿ ಎಂದರು. ಅದಕ್ಕೆ ಸುಮ್ಮನಿರದೆ, ಏನು ತುಕಾರಾಮ್ಜೀ ಈಗಾಗಲೇ ನಿಮ್ಮ ಮನೆಯನ್ನು ಹಾಳು ಮಾಡಿದಿರಿ, ಮಕ್ಕಳಿಗೆ ಹೊತ್ತಿಗೆ ತಿನ್ನಲು ಗತಿಯಿಲ್ಲ. ಎಲ್ಲಾ ಬರಿದು ಮಾಡಿದ್ದೀರಿ, ನಿಮ್ಮ ಹೆಂಡತಿ ಜೀಜಾಬಾಯಿ ಕಂಡಕಂಡಲ್ಲಿ ಸಾಲ ಮಾಡಿ ಜೀವನ ಸಾಗಿಸಲು ಪರದಾಡುತ್ತಿದ್ದಾಳೆ. ನಿಮಗೆ ಸಂಸಾರವೆಂದರೆ ಏನೆಂದು ಗೊತ್ತಿಲ್ಲ, ಹೀಗಿರುವಾಗ ನಿಮಗೆ ಯಾರು ಕೆಲಸ ಕೊಡುತ್ತಾರೆ. ಪಾಪ ಇನ್ನೇನು ಮಾಡುತ್ತಿರಿ, ಹೋಗಿ ನಾಲ್ಕು ಮನೆ ಭಿಕ್ಷೆ ಬೇಡಿ ಇದು ಬಿಟ್ಟರೆ ಬೇರೆ ಕೆಲಸ ಇಲ್ಲ ಎಂದು  ಹಂಗಿಸಿ ಮಾತನಾಡಿದ.

ತುಕಾರಾಮರಿಗೆ ‘ಭಿಕ್ಷೆ ‘ಎಂಬ ಶಬ್ದದಿಂದ ಮನನೊಂದಿತು. ಕಣ್ಣುಗಳು ತುಂಬಿ ಬಂದವು. ಹೇ ಪಾಂಡುರಂಗ, ಪಾಂಡುರಂಗ ಎನ್ನುತ್ತಾ ತಮ್ಮ ಕಿವಿಗಳನ್ನು  ಮುಚ್ಚಿಕೊಂಡರು.

ಅದೇ ಹೊತ್ತಿಗೆ ಊರಿನ ಪರಿಚಯವಿದ್ದ ‘ಜ್ಞಾನೋಬ’ ಆ ದಾರಿಯಲ್ಲಿ ಬರುತ್ತಿದ್ದನು ಇದನ್ನು ಕೇಳಿ, ತುಕಾರಾಮರೇ, ಬನ್ನಿ ಪರಮಾತ್ಮ ದೊಡ್ಡವನು ನಾಳೆ ನಾನು ಬೇರೆ ಊರಿಗೆ ಹೋಗಬೇಕಾಗಿದೆ ನಾನು ಬರುವತನಕ ನಮ್ಮ ಹೊಲವನ್ನು ಕಾಯಿರಿ ಎಂದು ಹೇಳಿ ತುಕಾರಾಮರಿಗೆ ತನ್ನ ಹೊಲವನ್ನು ತೋರಿಸಿಕೊಟ್ಟನು.

ಮರುದಿನ ತುಕಾರಾಮರು, ಜ್ಞಾನೋಬನ ಹೊಲಕ್ಕೆ ಹೋಗಿ ಒಮ್ಮೆ ನಿಂತು ಹೊಲದ ಕೊನೆತನಕ ಕಣ್ಣು ಹಾಯಿಸಿದರು. ಹೊಲದ ತುಂಬೆಲ್ಲ  ಹಸಿರು ಕಂಗೊಳಿಸುತ್ತಿದೆ. ರಾಶಿ ರಾಶಿ ಬೆಳೆ ಬೆಳೆದು ನಿಂತಿದೆ. ತೆನೆಗಟ್ಟಿ ಕಾಳು ತುಂಬಲು ಸಜ್ಜಾಗಿತ್ತು.

ಪಾಂಡುರಂಗನ ಲೀಲೆಯ ಕುರಿತು ತುಕಾರಾಮರು ಯೋಚಿಸಿದರು. ಹೇ ಪಾಂಡುರಂಗ ಏನಪ್ಪಾ ನಿನ್ನ ಲೀಲೆ, ಒಂದು ಕಾಳಿಗೆ ಇಷ್ಟೊಂದು ಧಾನ್ಯಗಳು ಸಿಗುತ್ತದೆಯಲ್ಲಾ, ಏನು ನಿನ್ನ ಮಹಿಮೆಯೋ, ನಿನ್ನನ್ನು ಅರಿಯಲು  ನಮ್ಮಂಥ ಹುಲುಮಾನವರಿಂದ ಸಾಧ್ಯವಿದೆಯೇ? ಹೀಗೆ ಯೋಚಿಸುತ್ತಾ ಮೈಮರೆತು ಒಂದು ಕಡೆ ಕುಳಿತು ಧ್ಯಾನ ಮಗ್ನರಾದರು.

ಇದಕ್ಕಾಗಿ ಹೊಂಚುಹಾಕಿ ಕಾದಿದ್ದ ‘ಸಾಲೋಮಾಲೋ’ ಜಗದ ಪರಿವೆ ಇಲ್ಲದೆ  ಪೂರ್ತಿ ಧ್ಯಾನದಲ್ಲಿ ಮುಳುಗಿದ್ದ  ತುಕಾರಾಮರಿಗೆ, ಮಾಡುತ್ತೇನೆ ಇವರಿಗೆ ಎನ್ನುತ್ತಾ ಸಾಲೋಮಾಲೋ ಊರ ಹಾದಿಗೆ ಹೋಗಿ ಅಲ್ಲಿದ್ದ ಎರಡು ಹಸುಗಳನ್ನು ತಂದು ತುಕಾರಾಮನು ಕಾಯುತ್ತಿದ್ದ ಹೊಲದಲ್ಲಿ ಮೇಯಲು ಬಿಟ್ಟು ತಾನು ಹೊರಟುಹೋದನು.

ಈ ವೇಳೆ ತುಕಾರಾಮರು ಧ್ಯಾನದಲ್ಲಿ ತಲ್ಲೀನರಾಗಿದ್ದರು. ಹಸುಗಳು ಹೊಲವನ್ನೆಲ್ಲಾ ಮೇಯ್ದವು. ಬೆಳೆದ ಫಸಲುಗಳೆಲ್ಲಾ ನಾಶವಾಯಿತು. ಊರಿಗೆ ವಾಪಸ್ ಬಂದ ‘ಜ್ಞಾನೋಭ’. ತನ್ನ ಹೊಲದ ಬೆಳೆ ನಾಶವಾಗಿದ್ದನ್ನು ಕೇಳಿ ಕಂಗಾಲಾದನು. ಅವನಿಗೆ ತುಕಾರಾಮರ ಮೇಲೆ ಅಸಾಧ್ಯ ಕೋಪ ಬಂದಿತು.

ಅಷ್ಟುಹೊತ್ತಿಗೆ ಸರಿಯಾಗಿ ಅಲ್ಲಿಗೆ ಬಂದ ಸಾಲೋ ಮಾಲೋ “ಏನು  ಜ್ಞಾನೋಬ ನಿನ್ನ ಹೊಲದ ಬೆಳೆಯೆಲ್ಲ  ನಾಶವಾಯಿತಾ? ಎಂದು ಕೇಳಿದನು. ಜ್ಞಾನೋಬನು  ಏನೂ ಹೇಳದೆ ತಲೆತಗ್ಗಿಸಿದ. ಮತ್ತೆ ಸುಮ್ಮನಿರದ ಸಾಲೋ ಮಾಲೋ ಎಲ್ಲಾ ಬಿಟ್ಟು ಅಂತಹ ಅರೆಬರೆ ಹುಚ್ಚರಿಗೇ ಕೆಲಸ ಕೊಡಬೇಡ ಎಂದಿದ್ದೆ. ಈಗ ನಿನಗೆ ಗೊತ್ತಾಯಿತಾ? ನೀನೇ ಅನುಭವಿಸು. ಆದರೆ ನನ್ನ ಪಾಲಿಗೆ ಬರಬೇಕಾದ ಧಾನ್ಯವನ್ನು ಎಂದಿಗೂ ನಾನು ಬಿಡುವುದಿಲ್ಲ. ಕಳ್ಳತನ ಮಾಡಿದರೂ ಸರಿಯೇ ನನ್ನ ಪಾಲಿನ ಧಾನ್ಯ  ನನಗೆ ತಂದು ಕೊಡಬೇಕು ಎಂದು ಧಮಕಿ ಹಾಕಿದ. ಇಷ್ಟೇ ಅಲ್ಲದೆ ಸಾಲೋ ಮಾಲೋ, ತುಕಾರಾಮರನ್ನು ಊರ ಗೌಡರ ಹತ್ತಿರ ನ್ಯಾಯ ತೀರ್ಪಿಗೆ ಕರೆತಂದು ನಿಲ್ಲಿಸಿದ.

ತುಕಾರಾಮರು ಹೊಲದ ಬೆಳೆ ಹಾಳು ಮಾಡಿದ ಕಾರಣ, ಅದರ ಬದಲಿಗೆ ಅವರ  ಮನೆಯನ್ನು ಜ್ಞಾನೋಬನಿಗೆ  ಕೊಡಬೇಕೆಂದು ತೀರ್ಮಾನವಾಗಿ, ಕಾಗದಪತ್ರಗಳು ತಯಾರಾಯಿತು. ಇತ್ತ ಜ್ಞಾನೋಬನು ತನ್ನ ಹೊಲಕ್ಕೆ ಬಂದು ಹಸುಗಳು ತಿಂದುಬಿಟ್ಟ ಬೆಳೆಯ ದಂಟುಗಳನ್ನೆಲ್ಲ ಆರಿಸಿ, ಜೋಡಿಸಿ ನೋಡುತ್ತಾ, ಎಲ್ಲಾ ಪಾಂಡುರಂಗನ ಲೀಲೆ ಎಂದು ಅಳತೊಡಗಿದ, ಅವನೇ ಕಾಪಾಡುತ್ತಾನೆ. ಎನ್ನುತ್ತಾ ತನ್ನನ್ನು ತಾನೇ ಸಮಾಧಾನ ಪಡಿಸಿಕೊಂಡು ಪಾಂಡುರಂಗನನ್ನು ಧ್ಯಾನಿಸುತ್ತಾ ಉಳಿದ ಜೋಳವನ್ನು ಕೊಯ್ದು ರಾಶಿಮಾಡಿ ಕಣ ಕಟ್ಟಿದ.

ಕಟ್ಟಿದ ಕಣಗಳು ಅನೇಕ ಖಂಡಗಳ ರಾಶಿಯೇ ಆಯಿತು. ಜ್ಞಾನೋಬನ ಸಂತೋಷಕ್ಕೆ ಪಾರವೇ ಇಲ್ಲವಾಯಿತು.  ಖಂಡದಲ್ಲಿ ಸಾಲೊ ಮಾಲೋನ ಪಾಲು ತೆಗೆದಿಟ್ಟ. ನಂತರ ತನ್ನ ಪಾಲನ್ನು ತೆಗೆದುಕೊಂಡು ಉಳಿದ ರಾಶಿಗಳನ್ನು ಗಾಡಿಯಲ್ಲಿ ತುಂಬಿ ತುಕಾರಾಮರ ಮನೆಗೆ ಕೊಂಡೊಯ್ದು ತುಕಾರಾಮರಿಗೆ ಅವನ್ನೆಲ್ಲ ಒಪ್ಪಿಸಿ, ತಮ್ಮ ಮಹಿಮೆ ಅಪಾರವಾದದ್ದು ಎನ್ನುತ್ತಾ ಅವರ ಕಾಲಿಗೆ ಬಿದ್ದು ನಮಸ್ಕರಿಸಿದನು.

ತಾವು ಮಹಿಮಾನ್ವಿತರು ತಮ್ಮ ಗುಣವರಿಯದೆ ಮೂಢನಾದೆ. ತಮ್ಮ ಮನವರಿಯದೆ ಮನೆ ಬರೆಸಿಕೊಂಡು ತಮ್ಮನ್ನು ನೋಯಿಸಿದೆ. ನನ್ನ ಅಪರಾಧಗಳನ್ನು ಮನ್ನಿಸಿ. ನನ್ನ ಅಳತೆಗೂ ಮೀರಿದ ಈ ಜೋಳದರಾಶಿ ನಿಮಗೆ ಸೇರಬೇಕು ಎಂದು ಧಾನ್ಯಗಳ ರಾಶಿಗಳನ್ನು ತುಕಾರಾಮರಿಗೆ ಅರ್ಪಿಸಿದನು.

ಬರಹ: ಆಶಾ ನಾಗಭೂಷಣ. ಸಂಗ್ರಹ: ನರಸಿಂಹಮೂರ್ತಿ ಬರಗೂರು. (ಸಾಮಾಜಿಕ ಜಾಲತಾಣದಲ್ಲಿನ ಸಂಗ್ರಹ ಚಿತ್ರ ಬಳಸಲಾಗಿದೆ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಒಂದು ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್

ಒಂದು ವಾರದೊಳಗೆ ಎತ್ತಿನಹೊಳೆ ಬಾಕಿ ಕಾಮಗಾರಿ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್

“ಕೇಂದ್ರ ಪರಿಸರ ಇಲಾಖೆಯವರು ದಂಡ ಹಾಗೂ ಮಿಟಿಗೇಷನ್ ಪ್ಲಾನ್ ಸೇರಿ 257 ಕೋಟಿ ರೂಪಾಯಿ ಹಣ ಸಂದಾಯ ಮಾಡಬೇಕು ಎಂದು ಸೂಚಿಸಿದ್ದಾರೆ. ಇಂದೇ ಈ ಹಣ ಪಾವತಿ ಮಾಡಿ ಎಂದು ಮಾರ್ಗದರ್ಶನ ನೀಡಿದ್ದೇನೆ. ಕಟ್ಟಿದ

[ccc_my_favorite_select_button post_id="121560"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]