ದೊಡ್ಡಬಳ್ಳಾಪುರ, (ಡಿ.05): ರೈಲು ಹಳಿಗಳ ಮೇಲೆ ದುಷ್ಕರ್ಮಿಗಳು ಸೈಜು ಕಲ್ಲಿಟ್ಟ ಪರಿಣಾಮ, ರೈಲಿನ ಮುಂಭಾಗಕ್ಕೆ ಹಾನಿ ಮಾಡಿದ ಘಟನೆ ದೊಡ್ಡಬಳ್ಳಾಪುರ ಹೊರವಲಯದ ನಂದಿಮೋರಿ ಬಳಿ ನಡೆದಿದೆ.

ಸೋಮವಾರ ಸ್ಥಳಕ್ಕೆ ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿ ಸೌಮ್ಯಲತಾ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಳೆದ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಈ ಮಾರ್ಗದಲ್ಲಿ ಕೂರ್ಲಾ ರೈಲು ಸಂಚರಿಸುತ್ತಿದ್ದಾಗ ಚಾಲಕ ತಕ್ಷಣ ರೈಲು ನಿಲ್ಲಿಸಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಹಳಿ ಮೇಲಿದ್ದ ಸೈಜು ಕಲ್ಲು ಹೊರಹಾಕಿ ಮತ್ತೆ ರೈಲು ಚಾಲನೆ ಮಾಡಿದ್ದಾನೆ.
ಸೈಜು ಕಲ್ಲಿನಿಂದ ರೈಲಿನ ಮುಂಭಾಗಕ್ಕೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ತಿಳಿದು ಬಂದಿದ್ದು, ಘಟನೆಯ ಗಂಭೀರತೆ ಅರಿತ ರೈಲ್ವೇ ಪೊಲೀಸ್ ವರಿಷ್ಠಾಧಿಕಾರಿ ಡಾ.ಸೌಮ್ಯಲತಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೈಲ್ವೇ ಪೊಲೀಸರು ಈ ಮಾರ್ಗದಲ್ಲಿ ಕಾವಲು ಕಾಯಲು ಗನ್ ಮ್ಯಾನ್‌ಗಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ ಎನ್ನಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
