
ಭಾರತವು ಜಿ20 ಶೃಂಗಸಭೆಯ ಆತಿಥ್ಯ ವಹಿಸಿರುವುದರಿಂದ ವಿಶ್ವಪ್ರಸಿದ್ಧ ನಂದಿ ಭೋಗನಂದೀಶ್ವರ ದೇವಸ್ಥಾನಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ.

ಭಾರತ ಜಿ–20 ಗುಂಪಿನ ಅಧ್ಯಕ್ಷತೆಯನ್ನು ಇತ್ತೀಚೆಗೆ ವಹಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳೂ ಸೇರಿದಂತೆ ದೇಶದ 100 ಸ್ಮಾರಕಗಳು ಡಿಸೆಂಬರ್ 1ರಿಂದ 7 ರವರೆಗೆ ಜಿ–20 ಲಾಂಛನವನ್ನು ಒಳಗೊಂಡಂತೆ ದೀಪಾಲಂಕಾರದಿಂದ ಝಗಮಗಿಸಲಿವೆ.

ದೇಶದ ನೂರು ಪ್ರಮುಖ ಪ್ರವಾಸಿ ತಾಣಗಳಿಗೆ ಡಿಸೆಂಬರ್ 7ರ ವರೆಗೆ ವಿದ್ಯುತ್ ದೀಪಾಲಂಕಾರ ಇರಲಿದೆ. ಇದರಲ್ಲಿ ನಂದಿ ಕ್ಷೇತ್ರವೂ ಸೇರಿದೆ. ಭೋಗನಂದೀಶ್ವರ ದೇವಸ್ಥಾನದ ಭಿತ್ತಿಗಳು, ಪಡಸಾಲೆಗಳು, ಮಂಟಪಗಳು, ಆವರಣದಲ್ಲಿನ ಎಲ್ಲಾ ದೇವಸ್ಥಾನಗಳು ಸೇರಿದಂತೆ ಹೊರಾಂಗಣದ ಸ್ಮಾರಕಗಳು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.
ದೇವಾಲಯದಲ್ಲಿ ಎಲ್ ಇಡಿ ಪರದೆ ಅಳವಡಿಸಲಾಗಿದ್ದು, ಜಿ20 ಶೃಂಗಸಭೆಯ ವಿವರವನ್ನು ಅದರಲ್ಲಿ ಬಿತ್ತರವಾಗುತ್ತಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
