ದೊಡ್ಡಬಳ್ಳಾಪುರ, (ಡಿ.15): ಮನೆಯ ಬಳಿ ಅವಿತಿದ್ದ ದೈತ್ಯ ನಾಗರ ಹಾವಿನ ರಕ್ಷಿಸುವಲ್ಲಿ ಉರಗ ರಕ್ಷಕ ಸಾಧಿಕ್ ಎನ್ನವವರು ಯಶಸ್ವಿಯಾಗಿದ್ದಾರೆ.
ರೈಲ್ವೆ ಸ್ಟೇಷನ್ ಬಳಿ ಇರುವ ಕ್ವಾಟ್ರಸ್ ನಲ್ಲಿರುವ ಮನೆಯೊಂದರ ಬಳಿ ಸುಮಾರು 5 ಅಡಿ ಉದ್ದದ ನಾಗರ ಹಾವು ಸೇರಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಈ ಕುರಿತಂತೆ ನಗರದ ಉರಗ ರಕ್ಷಕ ಸಾಧಿಕ್ ಎನ್ನುವವರಿಗೆ ಕರೆ ಮಾಡಿದ ಸ್ಥಳೀಯರು, ಹಾವನ್ನು ಹಿಡಿಯುವಂತೆ ಮನವಿ ಮಾಡಿದರು.
ಕರೆ ಮಾಡಿದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಸಾಧಿಕ್ ಹಾವನ್ನು ಸುರಕ್ಷಿತವಾಗಿ ಹಿಡಿದು, ಅರಣ್ಯಕ್ಕೆ ಬಿಟ್ಟು ಬರಲು ಕೊಂಡೊಯ್ದರು.
ಹಾವಿನ ರಕ್ಷಣೆ ನಂತರ ಸ್ಥಳೀಯರಲ್ಲಿ ನೆಮ್ಮದಿ ಕಾರಣವಾಗಿದ್ದು, ದೈತ್ಯಾಕಾರದ ನಾಗರ ಹಾವನ್ನು ನೋಡಿ ಆಶ್ಚರ್ಯಚಕಿತರಾದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

