ಆನೇಕಲ್, (ಜುಲೈ.31): ಪುರಸಭೆ ಸದಸ್ಯನನ್ನು ಕೊಲೆ ಮಾಡಿದ್ದ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಮೈಸೂರಮ್ಮನದೊಡ್ಡಿಯಲ್ಲಿ ನಡೆದಿದೆ.
ಗುಂಡೇಟು ತಗುಲಿರೋ ಆರೋಪಿಯನ್ನು ಜೆಕೆ ಕಾರ್ತಿಕ್ ಎಂದು ಗುರುತಿಸಲಾಗಿದೆ.
ಪ್ರಕರಣದ A5 ನೇ ಆರೋಪಿ ಕಾರ್ತಿಕ್ ಆನೇಕಲ್ ತಾಲೂಕಿನ ಮೈಸೂರಮ್ಮನದೊಡ್ಡಿ ಬಳಿ ಅಡಗಿ ಕುಳಿತಿದ್ದ ಎನ್ನಲಾಗಿದೆ.
ಈ ವೇಳೆ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸ್ ಪೇದೆ ಸುರೇಶ್ ಅವರ ಮೇಲೆ ಹಲ್ಲೆ ಮಾಡಿದ್ದಾನಂತೆ. ಆಗ ಆನೇಕಲ್ ಇನ್‌ಸ್ಪೆಕ್ಟರ್ ತಿಪ್ಪೇಸ್ವಾಮಿ ಅವರು ಆರೋಪಿ ಕಾರ್ತಿಕ್ ಕಾಲಿಗೆ ಪೈರಿಂಗ್ ಮಾಡಿದ್ದಾರೆ. ಆಗ ಆರೋಪಿ ಬಲಗಾಲಿಗೆ ಗುಂಡು ತಾಕಿದೆ ಎಂದು ತಿಳಿದುಬಂದಿದೆ.
ಹಿನ್ನೆಲೆ; ಇದೇ ತಿಂಗಳ 24ರಂದು ಪುರಸಭಾ ಸದಸ್ಯ ಸ್ಕ್ರಾಪ್ ರವಿ ಅವರ ಹತ್ಯೆಯಾಗಿತ್ತು.
ಕಾರ್ತಿಕ್ ಜೆಕೆ, ಹರೀಶ್ ಅಲಿಯಾಸ್ ಹಂದಿ ಹರೀಶ್, ವಿನಯ್ ಅಲಿಯಾಸ್ ವಿನಿ ಸೇರಿದಂತೆ ಸಹಚರರು ಪುರಸಭಾ ಸದಸ್ಯನ ರವಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ.
ಹೀಗಾಗಿ ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ರವರ ನೇತೃತ್ವದಲ್ಲಿ ಆರೋಪಿಗಳಿಗಾಗಿ ಕಾರ್ಯಾಚರಣೆ ನಡೆಸಲಾಗಿತ್ತು. ರವಿ ಅವರ ಕೊಲೆ ಕೇಸ್ನಲ್ಲಿ ಕಾರ್ತಿಕ್ ಅಲಿಯಾಸ್ ಜೆಕೆ 5 ನೇ ಆರೋಪಿಯಾಗಿದ್ದ ಎಂದು ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

