ದೊಡ್ಡಬಳ್ಳಾಪುರ: ನಗರದ ಹಿರಿಯ ಔಷಧ ವ್ಯಾಪಾರಿ ಸಿದ್ದಣ್ಣ ಮೆಡಿಕಲ್ಸ್ (Siddanna medicals) ಮಾಲೀಕರಾಗಿದ್ದ ಡಿ.ಎಸ್.ಸಿದ್ದಪ್ಪ (D.S. Siddappa) ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮತ್ತು ಮಗ ಕುಟುಂಬಸ್ಥರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಶನಿವಾರ ಸಂಜೆ ವೀರಶೈವ ರುದ್ರಭೂಮಿಯಲ್ಲಿ ನಡೆಯಿತು.
ಮೃತರ ಕಣ್ಣುಗಳನ್ನು ಅವರ ಕುಟುಂಬದವರು ಡಾ.ರಾಜ್‌ಕುಮಾರ್ ನೇತ್ರ ಸಂಗ್ರಹಣಾ ಕೇಂದ್ರಕ್ಕೆ ದಾನ ಮಾಡಿದ್ದಾರೆ.