ದೊಡ್ಡಬಳ್ಳಾಪುರ: ಇಲ್ಲಿನ ಶಾಂತಿನಗರದ ಶ್ರೀಮುತ್ಯಾಲಮ್ಮ ಸೇವಾ ದತ್ತಿ ನೇತೃತ್ವದಲ್ಲಿ ಮಂಗಳವಾರ ಮುತ್ಯಾಲಮ್ಮ ದೇವಿ (Muthyalamma Devi) ರಥೋತ್ಸವ ನಡೆಯಿತು.
ರಥೋತ್ಸವದಲ್ಲಿ ವೀರಗಾಸೆ, ಡೊಳ್ಳು ಕುಣಿತ, ತಮಟೆ ಮುಂತಾದ ಕಲಾತಂಡಗಳು ಭಾಗವಹಿಸಿದ್ದವು.
ಇದಷ್ಟೇ ಅಲ್ಲದೆ ತಾಲ್ಲೂಕಿನ ದರ್ಗಾಜೋಗಿಹಳ್ಳಿ, ರೋಜಿಪುರ, ನಾಗಸಂದ್ರ ಗ್ರಾಮಗಳಿಂದಲ್ಲೂ ಮುತ್ಯಾಲಮ್ಮ ಜಾತ್ರೆಗೆ ಮಂಗಳವಾರ ಸಂಜೆ ಕುರ್ಜುಗಳಲ್ಲಿ ಆಯಾ ಗ್ರಾಮದ ದೇವರುಗಳನ್ನು ಪ್ರತಿಷ್ಠಾಪಿಸಿಕೊಂಡು ಹೂವಿನ ಆರತಿಗಳೊಂದಿಗೆ ಆಗಮಿಸಿದ್ದವು.
ಕುರುಬರಹಳ್ಳಿ, ಕೊಡಿಗೇಹಳ್ಳಿ ಸೇರಿದಂತೆ ನಗರ ಹಾಗೂ ತಾಲ್ಲೂಕಿನ ಗ್ರಾಮಸ್ಥರಿಂದಲು ಹೂವಿನ ಆರತಿ ಉತ್ಸವ ನಡೆಯಿತು. ಬುಧವಾರ ಹಗಲು ಪರಿಷೆ ನಡೆಯಲಿದೆ.
ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಜನ ಭಕ್ತರಿಗೆ ದೇವಾಲಯದ ವತಿಯಿಂದ ಪ್ರಸಾದ ವಿತರಿಸಲಾಯಿತು.

