ದೊಡ್ಡಬಳ್ಳಾಪುರ: ನಗರ ವ್ಯಾಪ್ತಿಯಲ್ಲಿ ಹಬ್ಬಿದ್ದ ಕರೊನಾ ಸೋಂಕು, ಕಳೆದ ಕೆಲ ದಿನಗಳಿಂದ ಗ್ರಾಮೀಣ ಭಾಗದ ಹಳ್ಳಿಗಳಿಗೆ ತೀವ್ರಗತಿಯಲ್ಲಿ ತನ್ನ ಕರಾಳ ಬಾಹುಗಳನ್ನು ಹರಡುತ್ತಿದೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ, ಶುಕ್ರವಾರದ ಸಂಜೆಯ ವರಗೆ. ದೊಡ್ಡಬಳ್ಳಾಪುರ ತಾಲ್ಲೂಕಿನ 66 ಪುರುಷರು ಹಾಗೂ 48 ಮಹಿಳೆಯರು ಸೇರಿ 114 ಜನರಿಗೆ ಸೋಂಕು ದೃಡಪಟ್ಟಿದೆ.
ತಾಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ ಅವರು ಹರಿತಲೇಖನಿಗೆ ನೀಡಿರುವ ಮಾಹಿತಿಯಂತೆ ಆಕಾಶ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದ ಕಾಳಮ್ಮ ದೇವಾಲಯದ ಸಮೀಪದ 60 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.
ಪ್ರಸ್ತುತ ತಾಲೂಕಿನಲ್ಲಿ 3327 ಮಂದಿಗೆ ಸೋಂಕು ತಗುಲಿದ್ದು, 2681 ಮಂದಿ ಗುಣಮುಖರಾಗಿದ್ದರೆ. ಬುಲೆಟಿನ್ ಮಾಹಿತಿಯಲ್ಲಿ ಸಾವಿನ ಪ್ರಕರಣ ಮಾಹಿತಿ ನೀಡಿಲ್ಲ. ಉಳಿದಂತೆ ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 590 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

