ನವದೆಹಲಿ: ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಅಧಿಕಾರಿ ಸ್ವೀಕರಿಸಿದರು.
ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ನಿಕಟಪೂರ್ವ ಅಧ್ಯಕ್ಷೆ ಪೂನಂ ಮಹಾಜನ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಇದಕ್ಕು ಮುನ್ನ ರಾಷ್ಟ್ರೀಯ ಅಂಬೇಡ್ಕರ್ ಭವನದ ಬಳಿಯಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ತೇಜಸ್ವಿ ಸೂರ್ಯ. ಬಿಜೆಪಿ ಪ್ರಧಾನ ಕಚೇರಿವರೆಗೂ ರೋಡ್ ಶೋ ನಡೆಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಘಟನೆಯನ್ನು ಬಲಪಡಿಸಲಿದ್ದೇವೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆರ್ಶಿವಾದ ಪಡೆದಿದ್ದೇನೆ ಸಮಾಜದ ಕಟ್ಟ ಕಡೆಯ ವರ್ಗವನ್ನು ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತೇವೆ. ದೇಶದ ಯುವ ನಾಯಕರನ್ನಾಗಿ ರೂಪಿಸುತ್ತೇವೆ ಎಂದರು. ಅಲ್ಲದೆ ಬೆಂಗಳೂರು ದಕ್ಷಿಣ ಕ್ಷೇತ್ರದ ಜನರಿಗೆ, ಕರ್ನಾಟಕದ ಜನರಿಗೆ ಧನ್ಯವಾದ ಸಲ್ಲಿಸಿದರು.

