ದೊಡ್ಡಬಳ್ಳಾಪುರ: ಕೇಂದ್ರ ಪುರಸ್ಕೃತ ಆತ್ಮ ಯೋಜನೆಯಡಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತರ ಶಾಸನಗಳು 2020 ಗ್ರಾಮ ಪಂಚಾಯತಿ ಮಟ್ಟದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ತಾಲೂಕಿನ ಆರೂಢಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ, ಜಿಕೆವಿಕೆಯ ನಿವೃತ್ತ ಪ್ರಾಧ್ಯಾಪಕ ಡಾ.ಟಿ.ಎನ್.ವೆಂಕಟರೆಡ್ಡಿಯವರು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ರೈತರ ಶಾಸನಗಳು – 2020ರ ಕುರಿತು ಆನ್ಲೈನ್ ತರಬೇತಿ ನೀಡಿದರು
ಈ ವೇಳೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸೌಭಾಗ್ಯಮ್ಮ, ಆತ್ಮ ಯೋಜನೆಯ ಸಾಸಲು ಹೋಬಳಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ದಶರಥ.ಎಚ್.ಎಸ್, ರೈತ ಮುಖಂಡರಾದ ರುದ್ರೇಶ್, ಸಿದ್ದೇಶ್ವ್, ನರಸಿಂಹಮೂರ್ತಿ ಮತ್ತಿತರಿದ್ದರು.

