ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾಪಂಚಾಯಿತಿ ಅಧ್ಯಕ್ಷೆ ಜಯಮ್ಮ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ವಯಕ್ತಿಕ ಕಾರಣ ಒಡ್ಡಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಪತ್ರ ಸ್ವೀಕೃತವಾಗಿದೆ.
ಕಳೆದ ಎರಡು ವರ್ಷಗಳಿಂದ ಅಧ್ಯಕ್ಷೆ ಹುದ್ದೆಯಲ್ಲಿದ್ದ ಜಯಮ್ಮ ಅವರ ವಿರುದ್ದ, ಅವಿಶ್ವಾಸ ಸೂಚನೆಯ ಕುರಿತ ಸಭೆಯನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಇದೇ ಅಕ್ಟೋಬರ್ 27 ರಂದು ಬೆಳಿಗ್ಗೆ 10:00 ಗಂಟೆಗೆ ನಿಗದಿ ಮಾಡಲಾಗಿತು.
ಈ ಮುನ್ನ ಅ.14ರಂದು ಸಹ ಅವಿಶ್ವಾಸ ಸೂಚನೆ ಸಭೆಗೆ ದಿನಾಂಕ ನಿಗದಿತ ಮಾಡಲಾಗಿತ್ತಾದರೂ, ಜಯಮ್ಮ ನ್ಯಾಯಲಯದ ಮೂಲಕ ಅವಿಶ್ವಾಸ ಸಭೆಯನ್ನು ರದ್ದು ಮಾಡಿಸಿದ್ದರು. ಅಲ್ಲದೆ ಮಾಜಿ ಸಚಿವ ಕೃಷ್ಣಾಬೈರೇಗೌಡ ಹಾಗೂ ಶಾಸಕ ಟಿ.ವೆಂಕಟರಮಣಯ್ಯರ ವಿರುದ್ದ ಹರಿಹಾಯ್ದಿದ್ದರು.

