ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸ್, ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್ ಗೆ ಒಂದೇ ಸಂಖ್ಯೆ 112ಕ್ಕೆ ಕರೆ ಮಾಡುವ ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ ಕೇಂದ್ರ ವಲಯದ ಆರಕ್ಷಕ ಮಹಾ ನಿರೀಕ್ಷಕ ಸೀಮಂತ್ ಕುಮಾರ್ ಸಿಂಗ್ ಚಾಲನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಆವರಣದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಪರಾಧ ಪ್ರಕರಣಗಳನ್ನು ಮತ್ತು ಅವಘಡ ನಿಯಂತ್ರಣ ಮತ್ತು ಸ್ಪಂದಿಸಲು ನಿಟ್ಟಿನಲ್ಲಿ 112 ಉಪಯುಕ್ತವಾಗಲಿದ್ದು, ಅಪರಾಧ ಕೃತ್ಯಗಳನ್ನು ತಡೆಗಟ್ಟಲು ಹಾಗೂ ಶೀಘ್ರವಾಗಿ ಸಾರ್ವಜನಿಕರಿಗೆ ಸ್ಪಂದಿಸಲು ನೆರವಾಗಲಿದೆ. ನೆರವಿಗೆ ಪೊಲೀಸರು ಯಾವ ರೀತಿ ನೆರವಾಗುತ್ತಾರೆ ಎನ್ನುವ ಪಾರದರ್ಶಕತೆಯನ್ನು ಈ ನೂತನ ವ್ಯವಸ್ಥೆ ಬಿಂಬಿಸಲಿದೆ. ಪೊಲೀಸ್ ಇಲಾಖೆ ಜನಸ್ನೇಹಿಯಾಗಿದ್ದು, ಸಾರ್ವಜನಿಕರ ಇಲಾಖೆಗೆ ಸಂಬಂದಿಸಿದ ಯಾವುದೇ ದೂರುಗಳನ್ನು ತ್ವರಿತವಾಗಿ ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಗಣೇಶ್, ಡಿವೈಎಸ್‍ಪಿ ಟಿ.ರಂಗಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್, ಸಬ್ಇನ್ಸ್ಪೆಕ್ಟರ್ ಗಜೇಂದ್ರ, ಸೋಮಶೇಖರ್ ಇದ್ದರು.
112 ಕಾರ್ಯವೈಖರಿ: ಹಾಲಿ ಇರುವ ಪೊಲೀಸ್ ಸಹಾಯವಾಣಿ 100, ಅಗ್ನಿಶಾಮಕ ಇಲಾಖೆಯ 101 ಮತ್ತು ಅಂಬ್ಯುಲೆನ್ಸ್ ಸೇವೆಗಳಿಗಾಗಿ 108 ಸೇವೆಗಳನ್ನು ಒಳಗೊಂಡಿದೆ. 112ಕ್ಕೆ ಕರೆ ಮಾಡುವ ಮೂಲಕ ಈ ಎಲ್ಲ ತುರ್ತು ಸೇವೆಗಳನ್ನು ಪಡೆಯಬಹುದು. 112 ಇಂಡಿಯಾ’ ಆ್ಯಪ್ ಡೌನ್ಲೋಡ್ ಮಾಡಿ ಅದರ ಮೂಲಕವೂ ಕರೆ, ಮಾಹಿತಿ ನೀಡಬಹುದು.
ಅಪಾಯದಲ್ಲಿರುವವರಿಗೆ ತುರ್ತು ವಾಹನಗಳು ತ್ವರಿತವಾಗಿ ಸ್ಥಳಕ್ಕೆ ಆಗಮಿಸಿ ನೆರವಾಗುತ್ತವೆ. ಎಂ.ಜಿ ರಸ್ತೆಯಲ್ಲಿರುವ ಸಿ.ಎಲ್ ಆ್ಯಂಡ್ ಎಂ ಕಚೇರಿಯಲ್ಲಿ ತುರ್ತು ಸ್ಪಂದನೆ ನಿಯಂತ್ರಣ ಕೊಠಡಿ ಸಿಬ್ಬಂದಿ ಕರೆ ಸ್ವೀಕರಿಸಲು ಮತ್ತು ಅವುಗಳನ್ನು ಸಂಬಂಧಪಟ್ಟ ಜಿಲ್ಲೆಗಳಿಗೆ ರವಾನಿಸಲು ತರಬೇತಿ ಹೊಂದಿರುತ್ತಾರೆ. ಬಳಿಕ ಕರೆ ಮಾಡಿದವರು ಹೆಸರು, ತುರ್ತು ನೆರವು ಬೇಕಾಗಿರುವ ವಿಳಾಸ, ಯಾವ ರೀತಿಯ ನೆರವು ಬೇಕೆಂಬುದನ್ನು ತಿಳಿಸಬೇಕು. ವಿಳಾಸ ತಿಳಿಯದಿದ್ದರೆ ಟವರ್ ಲೊಕೇಷನ್ ಇಲ್ಲವೇ ಜಿಪಿಎಸ್ ಮೂಲಕ ಜಾಗವನ್ನು ತಿಳಿದುಕೊಳ್ಳಲಾಗುತ್ತದೆ. ನಂತರ ಲೊಕೇಷನ್ ನೆರವಿನೊಂದಿಗೆ ಕರೆ ಮಾಡಿದವರ ಬಳಿಗೆ ವಾಹನದೊಂದಿಗೆ ಪೊಲೀಸರು ತೆರಳಿ ಸಹಾಯ ನೀಡಲಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ

