ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಮತ್ತು ತ್ಯಾಮಗೊಂಡ್ಲು ಪೋಲಿಸ್ ಠಾಣೆ ಗಡಿಭಾಗದಲ್ಲಿ ವ್ಯಕ್ತಿಯೋರ್ವನನ್ನು ಅಪರಿಚಿತ ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.
ಮೃತನನ್ನು ಯಲಹಂಕ ಪುಟ್ಟೇನಹಳ್ಳಿ ಗ್ರಾಮದ ಬೀರೆಗೌಡ ಎಂದು ಗುರುತಿಸಲಾಗಿದ್ದು, ಟಾಟಾ ಏಸ್ ಡ್ರೈವರ್ ಮತ್ತು ಮಾಲೀಕನಾಗಿದ್ದ ಈತನನ್ನು ಅಪ್ಪಕಾರನಹಳ್ಳಿ ಗ್ರಾಮದ ಬಳಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಗಡಿಯ ಕಾರಣ ಪ್ರಕರಣ ದಾಖಲು ಮಾಡಲು ಎರಡು ಪೋಲಿಸ್ ಠಾಣೆ ನಡುವೆ ಗೊಂದಲ ಉಂಟಾದ ಕಾರಣ, ಪೊಲೀಸರು ಚರ್ಚಿಸಿ ತ್ಯಾಮಗೊಂಡ್ಲು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

