ವಿಜಯಪುರ: ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ವಿರೋಧಿಸಿ ಡಿ.5 ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ವಿರೋಧಿಸಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕನ್ನಡ ಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ಖಂಡಿಸಿ ನಾನಾ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಿದವು. ವಿಡಿಯೋ ನೋಡಿ..????
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಎದುರು ಸ್ವಾಮಿ ವಿವೇಕಾನಂದ ಸೇನೆ, ನಾನಾ ದಲಿತ ಪರ, ಪ್ರಗತಿ ಪರ, ಹಿಂದೂ ಪರ ಸಂಘಟನೆಗಳು, ಯತ್ನಾಳ ಅಭಿಮಾನಿ ಬಳಗದ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ವಾಟಾಳ್ ನಾಗರಾಜ್ ಮತ್ತು ನಾರಾಯಣಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ದಹನ ಮಾಡುವ ಮೂಲಕ ನಾನಾ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಸ್ವಾಮಿ ವಿವೇಕಾನಂದ ಸೇನೆ ಸಂಸ್ಥಾಪಕ ರಾಘವ ಅಣ್ಣಿಗೇರಿ, ವಾಟಾಳ್ ನಾಗರಾಜ್ ವಿರುದ್ಧ ಕಟುವಾಗಿ ಟೀಕಿಸಿದರು. ಡಿ.5 ಕರೆ ನೀಡಿರುವ ಕರ್ನಾಟಕ ಬಂದ್ ಬಡವಿರೋಧಿ, ಜನವಿರೋಧಿ, ಕೂಲಿ ಕಾರ್ಮಿಕ ವಿರುದ್ಧವಾಗಿ ವಾಟಾಳ ನಾಗರಾಜ್ ಕರೆ ನೀಡಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇವರ ಡೆಪಾಸಿಟ್ ಜಪ್ತಿಯಾಗಿದೆ. ಇವರಿಗೆ ನಾಚಿಕೆಯಾಗಬೇಕು. ಕರ್ನಾಟಕ ಬಂದ್ ಮಾಡಿಸುವುದು ಬಿಡಲಿ ನಿಮ್ಮ ವಾರ್ಡ್ ಬಂದ್ ಮಾಡಿಸಿ ತೋರಿಸಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎಷ್ಟು ಹಣ ಲೂಟಿ ಮಾಡಿದ್ದೀರಿ?
50 ಲಕ್ಷ ರೂಪಾಯಿ ಹಣವನ್ನು ಲೂಟಿ ಮಾಡಿ ಯಾವ ಕನ್ನಡ ಸಂಘಟನೆಗಳೂ ಯಾಕೆ ನೀಡಿಲ್ಲ. ಅದು ನಮ್ಮ ತೆರಿಗೆ ಹಣ. ತನ್ನ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಹಾಕಿ ಏನು ಕನ್ನಡ ರಕ್ಷಣೆ ಮಾಡುತ್ತೀರಿ? ನಿಮ್ಮಿಂದ ನಾವು ಕನ್ನಡ ಕಲಿಯಬೇಕಿಲ್ಲಎಂದು ವಾಟಾಳ್ ನಾಗರಾಜ ಮತ್ತು ನಾರಾಯಣಗೌಡ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

