ದೊಡ್ಡಬಳ್ಳಾಪುರ: ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಸ್ಥಾನಕ್ಕೆ ಪದ್ಮಾವತಿಅಣ್ಣಯಪ್ಪ ರಾಜೀನಾಮೆ ಸಲ್ಲಿಸಿದ್ದು, ಚುನಾವಣೆ ಡಿ.2ರಂದು ನಡೆಯಲಿದೆ ಎಂದು ತಾಪಂ ಇಒ ಮುರುಡಯ್ಯ ತಿಳಿಸಿದ್ದಾರೆ.
ಮೀನಾಕ್ಷಿ ಕೆಂಪಣ್ಣ ರಾಜೀನಾಮೆಯಿಂದ ತೆರವಾಗಿದ್ದ ತಾಪಂ ಉಪಾಧ್ಯಕ್ಷ ಸ್ಥಾನಕ್ಕೆ ಪದ್ಮಾವತಿಅಣ್ಣಯ್ಯಪ್ಪ ಆಯ್ಕೆಯಾಗಿದ್ದು, ಪೂರ್ವ ಒಪ್ಪಂದಕ್ಕೆ ಬದ್ದರಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಆ.27ರಂದು ಉಪಾಧ್ಯಕ್ಷೆ ಸ್ಥಾನಕ್ಕೆ ನಡೆದ ಚುನವಾಣೆ ವೇಳೆ ಗುಂಡಮಗೆರೆ ತಾಪಂ ಸದಸ್ಯೆ ಪದ್ಮಾವತಿಅಣ್ಣಯ್ಯಪ್ಪ ಹಾಗೂ ಸಕ್ಕರೆಗೊಲ್ಲಹಳ್ಳಿ ತಾಪಂ ಸದಸ್ಯೆ ಯಶೋಧಮ್ಮಶಿವಕುಮಾರ್ ನಡುವೆ ಸ್ಪರ್ದೆ ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಉಳಿದಿದ್ದ ಅವಧಿಯನ್ನು ಇಬ್ಬರಿಗೂ ಹಂಚಿಕೆ ಮಾಡಿ ಮೊದಲ ಅವಧಿಗೆ ಪದ್ಮಾವತಿಅಣ್ಣಯ್ಯಪ್ಪರಿಗೆ ನೀಡಿತ್ತು. ಅವಧಿ ಮುಗಿದ ಕಾರಣ ಪೂರ್ವ ನಿರ್ಣಯದಂತೆ ಪದ್ಮಾವತಿಅಣ್ಣಯ್ಯಪ್ಪ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
22 ಸದಸ್ಯತ್ವ ಬಲದ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಪಕ್ಷ 16 ಸ್ಥಾನಗಳನ್ನು ಪಡೆದಿರುವ ಕಾರಣ ಸರಳ ಬಹುಮತನವನ್ನು ಹೊಂದಿದ್ದು. ಯಶೋಧಮ್ಮ ಶಿವಕುಮಾರ್ ಅವರ ಆಯ್ಕೆ ಬಹುತೇಕ ಖಚಿತವಾಗಿದೆ.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

