ದೊಡ್ಡಬಳ್ಳಾಪುರ: ಶಾಂತಿನಗರದ 5ನೇ ಕ್ರಾಸ್ ಉದ್ಯಾನವನದಲ್ಲಿ ಸ್ಥಳೀಯ ನಿವಾಸಿಗಳು ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದ ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕಿದೆ. ಅಲ್ಲಲ್ಲಿ ಚದುರಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನ. ಇಂದಿನ ಕರ್ನಾಟಕ ಮೊದಲಿಗೆ ಮೈಸೂರು ಹೆಸರಿನಿಂದ ಗುರುತಿಸಿಕೊಂಡಿತ್ತು ಎಂದು ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು.
ಶಾಂತಿನಗರದಲ್ಲಿ ಅತಿ ಹೆಚ್ಚು ಕನ್ನಡ ಪರ ಹೋರಾಟಗಾರರು ಹುಟ್ಟಿರುವುದು ತಾಲೂಕಿನ ಹೆಮ್ಮೆಯ ವಿಚಾರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಂ.ಆರ್.ವರದರಾಜ ಅಯ್ಯಂಗಾರ್, ನಿವೃತ್ತಿ ಶಿಕ್ಷಕಿ ಅರುಣ, ಸ್ಥಳೀಯರಾದ ಕೆ.ಪಿ. ಮಂಜುನಾಥ್, ಹೆಚ್.ಎಂ.ಶ್ರೀನಿವಾಸ್, ಸಂತೋಷ್, ಕೃಷ್ಣಮೂರ್ತಿ, ಯೋಗೇಶ್, ದಾದಾಪೀರ್, ಬಾಬು, ಗೋವಿಂದರಾಜ್ ಮತ್ತಿತರರು ಸಾರ್ವಜನಿಕರು ಭಾಗವಹಿಸಿದರು.
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

