ಭಯೋತ್ಪಾದನೆ…!
ಹೌದು.., ಭಾರತವನ್ನು ಕಾಡುತ್ತಿರುವ ಪಿಡುಗುಗಳಾದ ಆಹಾರ ಕೊರತೆ,ನಿರುದ್ಯೋಗ, ಮೂಲಸೌಕರ್ಯ ಕೊರತೆ ಇನ್ನೂ ಮುಂತಾದವುಗಳನ್ನು ತಕ್ಕಡಿಯ ಒಂದು ಕಡೆ ಇಡಬಹುದಾದರೆ, ಇನ್ನೊಂದು ಕಡೆ ಈ ಎಲ್ಲಾ ಪಿಡುಗುಗಳಿಗೂ ಸರಿಸಮನಾಗಿ ತೂಗುವ ಪಿಡುಗೆಂದರೆ ಅದು *ಭಯೋತ್ಪಾದನೆ*. ಅಂದರೆ nothing but *ಇಸ್ಲಾಮಿಕ್ ತೀವ್ರವಾದ…*
ಇದರ ಮೂಲ ಪಾಕಿಸ್ತಾನ ಎಂದು ಪ್ರತ್ಯೇಕವಾಗಿ ಹೇಳಬೇಕಾದ ಅವಶ್ಯಕತೆ ಇಲ್ಲ.
ಯಾಕೆಂದರೆ, ಭಯೋತ್ಪಾದನೆಯನ್ನು ನೀರು ಗೊಬ್ಬರ ಹಾಕಿ ಪೋಷಿಸುತ್ತಿರುವುದು ನಮ್ಮ ನೆರೆಯ ದೇಶವಾದ ಪಾಕಿಸ್ತಾನ ಎಂಬುದು ಜಾಗತಿಕವಾಗಿ ಬೆತ್ತಲಾದ ಸತ್ಯ.. ಇದೇ ಪಾಕಿಸ್ತಾನದ ಕುಮ್ಮಕ್ಕಿನಿಂದ ನಮ್ಮ ಭಾರತದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳು ನಡೆಸಿದ ಮತಾಂಧ ಮಾರಣಹೋಮಗಳು ಲೆಕ್ಕಕ್ಕಿಲ್ಲದಷ್ಟು..
ಹಾಗೆ ನೋಡಿದರೆ ಇಸ್ಲಾಮಿಕ್ ಉಗ್ರಗಾಮಿಗಳ ಮೂಲ ಪಕ್ಕದ ಪಾಕಿಸ್ತಾನದಲ್ಲಿದೆಯಾದರೂ,,, ಧಾರ್ಮಿಕ ಅಂಧತ್ವದ ಬಲಹೀನತೆಯ ದುರ್ಬಳಕೆ ಮಾಡಿಕೊಂಡು ಅದು ತನ್ನ ಜಾಲವನ್ನು ಭಾರತದ ಅನೇಕ ಕಡೆಗಳಲ್ಲಿಯೂ ವಿಸ್ತರಿಸಿಕೊಂಡಿದೆ. ಅದಕ್ಕೆ ಆರ್ಥಿಕ, ನೈತಿಕ (ತೆರೆಮರೆ) ಬೆಂಬಲ ನೀಡಿದ್ದು ಭಾರತವನ್ನು ಈ ಹಿಂದೆ ಆಳಿದ ಸರ್ಕಾರಗಳು ಎಂಬುದರಲ್ಲಿ ಸಂಶಯವಿಲ್ಲ. ಕೇವಲ ಮತಬ್ಯಾಂಕ್ ಭದ್ರಪಡಿಸಿಕೊಳ್ಳುವ ಸಲುವಾಗಿ ಅತಿಯಾದ ಓಲೈಕೆ ರಾಜಕಾರಣಕ್ಕೆ ಜೋತುಬಿದ್ದ ರಾಷ್ಟ್ರೀಯ ಪಕ್ಷವೊಂದು ತನ್ನ ಸ್ವ ಹಿತಾಸಕ್ತಿಗಾಗಿ ದೇಶದ ಭವಿಷ್ಯಕ್ಕೆ ಕೊಳ್ಳಿಯಿಟ್ಟ ದುರಂತ ಇತಿಹಾಸ ನಮ್ಮ ದೇಶದ್ದು.
ಉತ್ತರದ ಕಾಶ್ಮೀರದಿಂದ ಹಿಡಿದು ದಕ್ಷಿಣದ ಕನ್ಯಾಕುಮಾರಿಯವರೆಗೂ ಭಯೋತ್ಪಾದನೆ ಹರಡಿಕೊಂಡಿರುವುದು ಭಾರತದ ಭವಿಷ್ಯದ ದೃಷ್ಟಿಯಿಂದ ಆತಂಕಕಾರಿಯೇ ಹೌದು.
ಭಯೋತ್ಪಾದಕರು ಪಾಕಿಸ್ತಾನದಿಂದಲೇ ಬರುತ್ತಾರೆ ಎಂಬುದು ನಮ್ಮ ಭ್ರಮೆಯೇ ಹೊರತು ಬೇರೇನಲ್ಲ. ಯಾಕೆಂದರೆ, ಉಗ್ರಗಾಮಿಗಳು ಎಲ್ಲಿಂದಲೋ ಭಾರತದೊಳಗೆ ಬರುತ್ತಿಲ್ಲ.
ನಮ್ಮಲ್ಲಿಯೇ ಹುಟ್ಟಿಕೊಳ್ಳುತ್ತಿದ್ದಾರೆ.
ಧರ್ಮದ ಹೆಸರಿನಲ್ಲಿ ಅವರನ್ನೆಲ್ಲಾ ಭಯೋತ್ಪಾದಕರನ್ನಾಗಿಸಲಾಗುತ್ತಿದೆ. ಅದಕ್ಕೆ ತಕ್ಕ ಹಾಗೆ ರಾಜಕೀಯ ಬೆಂಬಲವೂ ಅವರುಗಳಿಗೆ ಸಿಕ್ಕಿದೆ. ಇಡೀ ದೇಶದಲ್ಲೇ ಉಗ್ರಗಾಮಿಗಳ ಹಾಟ್‌ಸ್ಪಾಟ್ ಎಂದರೆ ಅದು ನಮ್ಮ ಕರ್ನಾಟಕ. ಹೌದು, ಕರ್ನಾಟಕದಲ್ಲಿ ನಡೆದ ಹಲವು ಘಟನೆಗಳನ್ನು ಗಮನಿಸಿದಾಗ ನಮಗೆ ಉಗ್ರವಾದದ ಅಸ್ತಿತ್ವ
ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು
ಗೋಚರಿಸಬಹುದು. ಮಂಗಳೂರಿನ ಗಲಭೆಗೆ ಕೇರಳದಿಂದ ಜಿಹಾದಿಗಳನ್ನು ಆವಕ ಮಡಿಕೊಂಡ ಘಟನೆ ಹಸಿಯಾಗಿದ್ದಾಗಲೇ ,,, ಪಾದರಾಯನಪುರ,
ಡಿಜೆ ಹಳ್ಳಿ ,ಕೆಜೆ ಹಳ್ಳಿ ಗಲಭೆಗಳಲ್ಲಿ ಜಿಹಾದಿ ಇಸ್ಲಾಮಿಕ್ ವಿಧ್ವಂಸಕ ಕೃತ್ಯಗಳು ನಡೆದವು. ಇಂತಹ ಘಟನೆಗಳು ನಡೆದ ಸಂದರ್ಭಗಳಲ್ಲಿ ಪಕ್ಷಬೇಧ ಮರೆತು ಕೇವಲ ವೋಟ್ ಬ್ಯಾಂಕ್‌ಗಾಗಿ ಕೃತ್ಯ ಎಸಗಿದವರನ್ನು ಬೆಂಬಲಿಸುವ ದೊಡ್ಡ ರಾಜಕಾರಣಿಗಳ ಪಡೆಯೇ ನಮ್ಮ ರಾಜ್ಯದಲ್ಲಿದೆ ಎಂಬುದು ದುರದೃಷ್ಟಕರ ಸಂಗತಿ.
ಒಂದು ರಾಷ್ಟ್ರೀಯ ಪಕ್ಷದ ಅತಿಯಾದ ಓಲೈಕೆಯ ಕಾರಣದಿಂದಲೇ ತನ್ನದೇ ಶಾಸಕನ ಮನೆ ಬೆಂಕಿಗಾಹುತಿಯಾದದ್ದು ಆ ಪಕ್ಷಕ್ಕೆ ಚಾಟಿ ಏಟು ಕೊಟ್ಟಂತಾಗಿದೆ. ಈ ಘಟನೆ ಘಟಿಸಿದಾಗ ನಮಗೆ *ಹಿಂದೂ ಜಾಗರಣ ವೇದಿಕೆ* ಯ ಹಿರಿಯ ಮುಖಂಡ *ಶ್ರೀ ಜಗದೀಶ್ ಕಾರಂತರು*
ಬಹಳ ಹಿಂದೆಯೇ ಆಗಿನ ಕಾಂಗ್ರೆಸ್ ಸರ್ಕಾರಕ್ಕೆ ಹೇಳಿದ್ದ ” ಕೇವಲ ಮತಕ್ಕಾಗಿ, ಅಧಿಕಾರದ ಲಾಲಸೆಗಾಗಿ ನೀವುಗಳು ತಲೆ ಮೇಲೆ ಹೊತ್ತು ಸಾಕಿದ ಇಸ್ಲಾಮಿಕ್ ಜಿಹಾದಿ ಭೂತ ನಿಮ್ಮ ಕಾಲಬುಡವನ್ನು ಸುಟ್ಟಾಗಲೇ ನಿಮಗೆ ಬುದ್ಧಿ ಬರುವುದು ” ಎಂಬ ಮಾತು ನೆನಪಿಗೆ ಬಂತು…
ಬೇಕಾದರೆ ನೀವು ಒಮ್ಮೆ ಕೆಲ ಗಲ್ಲಿಗಳನ್ನು ಹೊಕ್ಕು ನೋಡಿ, ಅಲ್ಲೆಲ್ಲಾ ರಾಷ್ಟ್ರ ವಿರೋಧಿ ವಾತಾವರಣವಿರುತ್ತದೆಯೇ ಹೊರತು ಬೇರೇನೂ ಇರುವುದಿಲ್ಲ. ಹುಟ್ಟಿದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕೆಲವರು “ಭಾರತ್ ತೇರೇ ತುಕಡೇ ಹೋಂಗೇ” ಎನ್ನುವವರೇ ..
ಜಿಹಾದಿ ಮುಸ್ಲಿಮರ ಮತಾಂಧತೆ ಎಷ್ಟರ ಮಟ್ಟಿಗೆ ಇದೆಯೆಂದರೆ, ಗೋಡೆಗಳ ಮೇಲೆ ಉಗ್ರಸಂಘಟನೆಗಳ ಆಹ್ವಾನ ಬರಹಗಳಿಂದ ಹಿಡಿದು ಪೊಲಿಸ್ ಠಾಣೆಗಳಿಗೆ ಬೆಂಕಿ ಹಚ್ಚುವುದರವರೆಗೂ.. *ಅಂಗೈ ಹುಣ್ಣಿಗೆ ಕನ್ನಡಿಯ ಹಂಗೇಕೆ* ಎಂಬ ಮಾತಿನಂತೆ
ಇದನ್ನೆಲ್ಲಾ ಮಾಡಲು ದೂರದ ಪಾಕಿಸ್ತಾನದಿಂದ ಉಗ್ರವಾದಿಗಳು ಬಂದಿಲ್ಲ. ಬದಲಿಗೆ ನಮ್ಮಲ್ಲಿಯೇ ಇರುವ ಜಿಹಾದಿ ನಪುಂಸಕರ ಕೃತ್ಯ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಸರ್ಕಾರಗಳು ಈ ಬಗ್ಗೆ ಗಂಭೀರ ಕ್ರಮ ತೆಗೆದುಕೊಂಡು ಇಸ್ಲಾಮಿಕ್ ಬಾಹುಳ್ಯದ ಪ್ರದೇಶಗಳಲ್ಲಿ ಹದ್ದಿನ ಕಣ್ಣಿರಿಸಿ ಇಸ್ಲಾಮಿಕ್ ಜಿಹಾದನ್ನು ಬೇರುಸಮೇತ ಕಿತ್ತೊಗೆದು ದೇಶದಲ್ಲಿ ಶಾಂತಿಯುತ ವಾತಾವರಣ ನಿರ್ಮಿಸಬೇಕೆಂಬ ಆಶಯದೊಂದಿಗೆ ಇಂತಿ ನಿಮ್ಮವ ಜಿ.ಎನ್.ಪ್ರದೀಪ್
ಹರಿತಲೇಖನಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಟ್ವಿಟರ್ ನಲ್ಲಿ ಫಾಲೋ ಮಾಡುವ ಮೂಲಕ ಪ್ರಮುಖ ಸುದ್ದಿಗಳ ಅಪ್ಡೇಟ್ ಪಡೆಯಿರಿ.

