ದೊಡ್ಡಬಳ್ಳಾಪುರ: ಇಂದು ನಡೆಯುತ್ತಿರುವ ಎರಡನೆ ಹಂತದ ಗ್ರಾಮಪಂಚಾಯಿತಿ ಸಾರ್ವತ್ರಿಕ ಚುನಾವಣೆ ತಾಲೂಕಿನಲ್ಲಿ ಆಮೆಗತಿಯಲ್ಲಿ ಆರಂಭವಾಗಿದೆ. ಇದೀಗ ಬಂದ ಮಾಹಿತಿಯಂತೆ 9 ಗಂಟೆ ವರದಿಯನ್ವಯ ತಾಲೂಕಿನಲ್ಲಿ ಶೇ.5.43ರಷ್ಟು ಮತದಾನವಾಗಿದೆ ಎಂದು ತಹಶಿಲ್ದಾರ್ ಟಿ.ಎಸ್.ಶಿವರಾಜ್ ಹರಿತಲೇಖನಿಗೆ ತಿಳಿಸಿದ್ದಾರೆ.
ತಾಲ್ಲೂಕಿನ ಒಟ್ಟು 25 ಗ್ರಾಮ ಪಂಚಾಯಿತಿಗಳ ಒಟ್ಟು 224 ಕ್ಷೇತ್ರಗಳ, 443 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ತಾಲ್ಲೂಕಿನಲ್ಲಿ 224 ಮೂಲ ಮತದಾನ ಕೇಂದ್ರಗಳು, 15 ಹೆಚ್ಚುವರಿ(ಆಕ್ಸಿಲರಿ) ಮತಗಟ್ಟೆಗಳು ಸೇರಿದಂತೆ ಒಟ್ಟು 239 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 94 ಸೂಕ್ಷ್ಮ ಮತಗಟ್ಟೆಗಳು, 45 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 100 ಸಾಮಾನ್ಯ ಮತಗಟ್ಟೆಗಳಿವೆ. 71207 ಪುರುಷ ಮತದಾರರು, 70773 ಮಹಿಳಾ ಮತದಾರರು ಹಾಗೂ 00 ಇತರೆ ಮತದಾರರು ಸೇರಿದಂತೆ ಒಟ್ಟು 141980 ಮತದಾರರಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ 239 ಮತಗಟ್ಟೆಗಳಿಗೆ 239 ಪಿ.ಆರ್.ಓ., 239 ಎ.ಪಿ.ಆರ್.ಓ., 478 ಪಿ.ಓ.ಗಳು, ಸೇರಿದಂತೆ 956 ಮತಗಟ್ಟೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಶೇ.10ರಷ್ಟು ಅಂದರೆ 96 ಸಿಬ್ಬಂದಿಗಳನ್ನು ಮೀಸಲು ಸಿಬ್ಬಂದಿಯಾಗಿ ನಿಯೋಜನೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎರಡನೇ ಹಂತದಲ್ಲಿ ನಡೆಯುತ್ತಿರುವ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲೂಕಿನ ಗ್ರಾಪಂ ಚುನಾವಣೆಯಲ್ಲಿ ಬೆಳಿಗ್ಗೆ 9.00 ಗಂಟೆಯವರೆಗೆ ಶೇ.6.91ರಷ್ಟು ಮತದಾನವಾಗಿದೆ.
*ದೊಡ್ಡಬಳ್ಳಾಪುರ: 5.43%* ದೇವನಹಳ್ಳಿ: 8.40%* *ಒಟ್ಟು: 6.91%*
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ

