
ದೊಡ್ಡಬಳ್ಳಾಪುರ: ತಾಲೂಕಿನ ಸಕ್ಕರೆಗೊಲ್ಲಹಳ್ಳಿ, ಕೊಡಿಗೇಹಳ್ಳಿ, ತೂಬಗೆರೆ, ಕಾಡನೂರು, ಮೇಲಿನಜೋಗಾನಹಳ್ಳಿ (ಘಾಟಿ), ಕೆಸ್ತೂರು, ಕೊನಘಟ್ಟ, ಹೆಗ್ಗಡಿಹಳ್ಳಿ, ದೊಡ್ಡಬೆಳವಂಗಲ, ಆರೂಢಿ, ಕನಸವಾಡಿ ಸೇರಿದಂತೆ 11 ಗ್ರಾಮಪಂಚಾಯಿತಿಗಳ ಅಧ್ಯಕ್ಷ / ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದಿದೆ.
1.ಕೊನಘಟ್ಟ ಗ್ರಾಪಂ: ಅಧ್ಯಕ್ಷ – ಮೋಹಿತಿನ್ ತಾಜ್, ಉಪಾಧ್ಯಕ್ಷ – ಸೋಮಶೇಖರ್ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2.ಕೊಡಿಗೇಹಳ್ಳಿ ಗ್ರಾಪಂ: ಅಧ್ಯಕ್ಷ – ಹೆಚ್.ಇ.ಮುನಿರಾಜು, ಉಪಾಧ್ಯಕ್ಷ – ಗೌರಮ್ಮ ಕಾಂಗ್ರೆಸ್ / ಜೆಡಿಎಸ್ ಬೆಂಬಲಿತ ಸದಸ್ಯರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.
3.ದೊಡ್ಡಬೆಳವಂಗಲ ಗ್ರಾಪಂ: ಅಧ್ಯಕ್ಷ – ರಾಮಕೃಷ್ಣಯ್ಯ, ಉಪಾಧ್ಯಕ್ಷ – ಜಿ.ಪುಷ್ಪಲತಾ ಕಾಂಗ್ರೆಸ್ ಬೆಂಬಲಿತ ಸದಸ್ಯರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.
4.ಸಕ್ಕರೆಗೊಲ್ಲಹಳ್ಳಿ ಗ್ರಾಪಂ: ಅಧ್ಯಕ್ಷ – ಗೀತಾ, ಉಪಾಧ್ಯಕ್ಷ – ಟಿ.ಎನ್.ನವೀನ್ ಕುಮಾರ್ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.
5.ಮೇಲಿನಜೋಗಾನಹಳ್ಳಿ (ಘಾಟಿ) ಗ್ರಾಪಂ: ಅಧ್ಯಕ್ಷ – ಭಾರತಿಬಾಯಿ, ಉಪಾಧ್ಯಕ್ಷ – ವಾಸುದೇವ್ ಬಿಜೆಪಿ ಬೆಂಬಲಿತ ಸದಸ್ಯರು ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.
6.ಕನಸವಾಡಿ ಗ್ರಾಪಂ: ಅಧ್ಯಕ್ಷ – ಟಿ.ವಿಜಯಕುಮಾರ್, ಉಪಾಧ್ಯಕ್ಷ – ವಿ.ಎಂ.ಶೋಭ ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
7.ಆರೂಢಿ ಗ್ರಾಪಂ: ಅಧ್ಯಕ್ಷ – ಜಯಮ್ಮ (ಚುನಾವಣೆ), ಉಪಾಧ್ಯಕ್ಷ – ಯಶೋಧಮ್ಮ (ಚುನಾವಣೆಯಲ್ಲಿ ಸಮ ಮತ ಬಂದ ಕಾರಣ ಲಾಟರಿ) ಮೂಲಕ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
8.ತೂಬಗೆರೆ ಗ್ರಾಪಂ: ಅಧ್ಯಕ್ಷ – ಸುರೇಶ್ ಬಾಬು, ಉಪಾಧ್ಯಕ್ಷ – ನಾಗಮ್ಮ ಬಿಜೆಪಿ – ಜೆಡಿಎಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
9.ಹೆಗ್ಗಡಿಹಳ್ಳಿ ಗ್ರಾಪಂ: ಅಧ್ಯಕ್ಷ – ಪಲ್ಲವಿ, ಉಪಾಧ್ಯಕ್ಷ – ಮುನಿರತ್ನಮ್ಮ ಅವಿರೋಧವಾಗಿ ಮತ್ತು ಪಕ್ಷಾತೀತವಾಗಿ ಆಯ್ಕೆಯಾಗಿದ್ದಾರೆ.
10.ಕಾಡನೂರು ಗ್ರಾಪಂ: ಅಧ್ಯಕ್ಷ – ಡಿ.ಲಕ್ಕಪ್ಪ, ಉಪಾಧ್ಯಕ್ಷ – ಶೋಭಕೃಷ್ಣಪ್ಪ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
11.ಕೆಸ್ತೂರು ಗ್ರಾಪಂ: ಅಧ್ಯಕ್ಷ – ರಾಜಮ್ಮ, ಉಪಾಧ್ಯಕ್ಷ – ಎಸ್.ಕೃಷ್ಣಪ್ಪ ಜೆಡಿಎಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಳಿದ ಗ್ರಾಮಪಂಚಾಯಿತಿಗಳ ಚುನಾವಣೆ ಶನಿವಾರ ನಡೆಯಲಿದೆ ಎಂದು ತಾಲೂಕು ಪಂಚಾಯಿತಿ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

