
ಬೆಂ.ಗ್ರಾ.ಜಿಲ್ಲೆ: ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟ ಪರಿಣಾಮ, ಈ ವ್ಯಾಪ್ತಿಯ ಹಲವು ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ ಎನ್ನಲಾಗುತ್ತಿದೆ.
ಶುಕ್ರವಾರ ರಾತ್ರಿ 9.30 ರ ಸಮಯದಲ್ಲಿ ಬೆಟ್ಟಕ್ಕೆ ಬೆಂಕಿ ಇಟ್ಟಿರುವುದು ಕಂಡು ಬಂದಿದೆ, ಬೆಂಕಿಯ ಕೆನ್ನಾಲಿಗೆ ತೀವ್ರವಾಗಿದ್ದ ಕಾರಣ ಹಾಗೂ ಬೆಟ್ಟದಲ್ಲಿನ ಹುಲ್ಲು ಒಣಗಿರುವ ಕಾರಣ ತ್ವರಿತಗತಿಯಲ್ಲಿ ಬೆಂಕಿ ವ್ಯಾಪಿಸಿದೆ ಎನ್ನಲಾಗುತ್ತಿದೆ.
ಕಿಡಿಗೇಡಿಗಳ ಕೃತ್ಯದಿಂದ ಅಪಾರ ಪ್ರಮಾಣದ ಅರಣ್ಯ, ವನ್ಯಜೀವಿ ಬೆಂಕಿಗೆ ಆಹುತಿಯಾಗಿದ್ದರೆ, ಮತ್ತೊಂದೆಡೆ ಬೆಟ್ಟದಲ್ಲಿ ಇತ್ತೆನ್ನಾಗುತ್ತಿದ್ದ ಚಿರತೆ ಬೆಂಕಿಗೆ ಹೆದರಿ ಮಾಕಳಿ ಗ್ರಾಮದ ಬಳಿ ಬೀಡು ಬಿಟ್ಟಿದೆ. ಶುಕ್ರವಾರ ರಾತ್ರಿ 9.45ರ ಸಮಯದಲ್ಲಿ ಗ್ರಾಮಕ್ಕೆ ನುಗ್ಗಿ ಮೂರು ಕೋಳಿಗಳನ್ನು ಹೊತ್ತೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದು, ರಾತ್ರಿಯಿಡಿ ಪಟಾಕಿ ಒಡೆದು, ತಮಟೆ ಸದ್ದು ಮಾಡುತ್ತಾ ಚಿರತೆ ಗ್ರಾಮಕ್ಕೆ ಬರದಂತೆ ಕಾದಿದ್ದಾರೆ.
ರಾತ್ರಿಯಾದ ಕಾರಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿಲ್ಲವಾಗಿದ್ದು ಇಂದು ಚಿರತೆ ಬಂಧನಕ್ಕೆ ಕ್ರಮಕೈಗೊಳ್ಳಲು ಮನವಿ ಸಲ್ಲಿಸಲು ಗ್ರಾಮಸ್ಥರು ಸಿದ್ದತೆ ನಡೆಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

