
ಬೆಂ.ಗ್ರಾ.ಜಿಲ್ಲೆ: ಹೊಸಕೋಟೆ ತಾಲ್ಲೂಕಿನ ದಂಡುಪಾಳ್ಯ ಗ್ರಾಮದ ರಾಷ್ಟ್ರೀಯ ಹೆದ್ದಾರಿ-75ರ ಸರ್ವೀಸ್ ರಸ್ತೆಯ ಎಂ.ವಿ.ಜೆ ಮೆಡಿಕಲ್ ಕಾಲೇಜು ರಿಸರ್ಚ್ ಆಸ್ಪತ್ರೆ ಮುಂಭಾಗದ ಬಳಿ ಖಚಿತ ಮಾಹಿತಿಯ ಮೇರೆಗೆ ಫೆಬ್ರವರಿ 4 ರಂದು ರಾತ್ರಿ 8:30 ಗಂಟೆಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ, ಒಂದು ದ್ವಿಚಕ್ರ ವಾಹನ ಮತ್ತು 960 ಗ್ರಾಂ ಹಸಿ ಗಾಂಜಾ ಜಫ್ತಿ ಪಡಿಸಿ, ಅರುಣ್.ಆರ್.ಶೆಟ್ಟಿಹಳ್ಳಿ ಎಂಬ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ಕಾರ್ಯಚರಣೆಯಲ್ಲಿ ಹೊಸಕೋಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಜನಾಯಿ, ಹೊಸಕೋಟೆ ವಲಯದ ಅಬಕಾರಿ ನಿರೀಕ್ಷಕರಾದ ರಾಜಶೇಖರ್.ಆರ್ ಕರಡಕಲ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕ ಭರತ್.ಕೆ.ಎನ್., ಅವರು ಭಾಗಿಯಾಗಿದ್ದು, ಹೊಸಕೋಟೆ ವಲಯದ ಅಬಕಾರಿ ನಿರೀಕ್ಷಕರಾದ ರಾಜಶೇಖರ್.ಆರ್ ಕರಡಕಲ್ ಅವರು ಪ್ರಕರಣವನ್ನು ದಾಖಲಿಸಿದ್ದಾರೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

