
ಕೋಲಾರ: ಜಾತಿಗಣತಿ ಜಾರಿಯಿಂದ ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಸಿಗುತ್ತದೆ ಮತ್ತು ಆರೋಗ್ಯ ಕರವಾಗಿರುತ್ತದೆ ಆಹಾರ ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಅವರು ತಿಳಿಸಿದರು.
ಕೋಲಾರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾತಿಗಣತಿಯೂ ಎಲ್ಲಾರಿಗೂ ಅನುಕೂಲಕರವಾಗಲಿದ್ದು, ಹಿಂದುಳಿದ ವರ್ಗದ ಜಾತಿಗಳಲ್ಲಿ ನೂರಾರು ಉಪಜಾತಿಗಳಿದ್ದು ಅವರಿಗೆ ಅನುಕೂಲವಾಗುತ್ತದೆ.
ಇದರ ಕುರಿತು ಕ್ಯಾಬಿನೆಟ್ ನಲ್ಲಿ ಚರ್ಚೆ ನಡೆಸಿ ಎಲ್ಲರ ಅಭಿಪ್ರಾಯವನ್ನು ಪಡೆದು ಲೋಪದೋಷಗಳಿದ್ದಲ್ಲಿ ಮುಖ್ಯಮಂತ್ರಿ ಗಳು ಸರಿಪಡಿಸಿ ಅಂತಿಮ ತೀರ್ಮಾನಕ್ಕೆ ಬರುತ್ತಾರೆ ಎಂದು KH Muniyappa ಸ್ಪಷ್ಟಪಡಿಸಿದರು.

