ದೊಡ್ಡಬಳ್ಳಾಪುರ : ಕರೊನಾ ಸೋಂಕಿನ ಹಿನ್ನೆಲೆ ಘೋಷಿಸಲಾದ ಲಾಕ್ ಡೌನ್ ಕಾರಣ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.ಅಂತೆಯೇ,ಅಂಗನವಾಡಿ ಕೇಂದ್ರಗಳಿಗೂ ರಜೆ ನೀಡಿದೆ.
ಈ ಹಿನ್ನೆಲೆಯಲ್ಲಿ ಮಕ್ಕಳು ಅಂಗನವಾಡಿ ಬರುತ್ತಿದ್ದ ವೇಳೆ ಕೇಂದ್ರಗಳಲ್ಲಿ ಅಡುಗೆಗೆ ಬಳಸುತ್ತಿದ್ಧ ವಸ್ತುಗಳನ್ನು ಮನೆ – ಮನೆಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಹಾಲಿಪುಡಿ,ಸಕ್ಕರೆ,ಬೆಲ್ಲ,ಅಕ್ಕಿ,ಕಡಲೆಬೇಳೆ,ಮೊಟ್ಟೆ,ಶೇಂಗಾ,ಸಾಂಬಾರು ಪುಡಿ,ಉಪ್ಪು ಎಣ್ಣೆ,ತೊಗರಿ ಬೇಳೆ,ಮೆಣಸಿನಕಾಯಿ ಯನ್ನು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಶಾಲೆಗೆ ತೆರಳುತ್ತಿದ್ದ ಮಕ್ಕಳ ಮನೆ ಮನೆಗೆ ತೆರಳಿ ನೀಡುತ್ತಿದ್ದಾರೆ.