ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಡಿ ಗೌರವಧನದ ಆಧಾರದ ಮೇಲೆ ಖಾಲಿಯಿರುವ ಪ್ರೋಗ್ರಾಮ್ ಮ್ಯಾನೇಜರ್ ಒಂದು ಹುದ್ದೆಗೆ ಅರ್ಜಿ ಸಲ್ಲಿಸಲು ಜೂ.29 ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಯು 11 ತಿಂಗಳು ಅವಧಿಯದ್ದಾಗಿದೆ. ಬಿ.ಎ ಪದವಿ/ಬಿ.ಎಸ್.ಡಬ್ಲ್ಯೂ ವಿಷಯಗಳಲ್ಲಿ ಪದವಿ ಹೊಂದಿದ್ದು, ವಿವಿಧ ಸಾಮಾಜಿಕ ಕಾರ್ಯಕ್ಷೇತ್ರಗಳಲ್ಲಿ, ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಟ 05 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿನ ಮಕ್ಕಳು ದುಡಿಯುವ ಪ್ರದೇಶಗಳು ಹಾಗೂ ವೃತ್ತಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿರಬೇಕು. ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯಿಂದ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕಾಲಕಾಲಕ್ಕೆ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಪ್ರತಿ ಮಾಹೆಯಾನ ಬಾಲ ಕಾರ್ಮಿಕ ತರಬೇತಿ ಕೇಂದ್ರಗಳ ಮಾಹಿತಿಯನ್ನು ಪಡೆದು ಕ್ರೋಢೀಕರಿಸಿ ಮಾಹಿತಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸುವುದು.
ಕೇಂದ್ರ ಸರ್ಕಾರದ ಫೆನ್ಸಿಲ್ ಸಾಪ್ಟ್‌ವೇರ್, ಫಿಎಫ್‌ಎಂಎಸ್ ಸಾಪ್ಟ್‌ವೇರ್‌ಗಳ ಬಳಕೆ ಹಾಗೂ ವರದಿಗಳನ್ನು ಆನ್‌ಲೈನ್ ಮೂಲಕ ನಿರ್ವಹಿಸುವುದು. ಬಾಲ ಕಾರ್ಮಿಕ ತರಬೇತಿ ಕೇಂದ್ರಗಳ ಮೇಲ್ವಿಚಾರಣೆ ಮಾಡಿ ವರದಿಯನ್ನು ಸಲ್ಲಿಸುವುದು, ಕನ್ನಡ ಮತ್ತು ಇಂಗ್ಲೀಷ್ ಮಾತನಾಡುವ ಹಾಗೂ ಬರೆಯುವಲ್ಲಿ ಉತ್ತಮ ಶೈಲಿಯನ್ನು ಹೊಂದಿರಬೇಕು. ಕಂಪ್ಯೂಟರ್ ಜ್ಞಾನವನ್ನು (M.S.Office, M.S.Excel & Internet operation,
kannada & English typing ಕಡ್ಡಾಯ) ಹೊಂದಿರಬೇಕು.
ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗೆ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸಲು ಇಚ್ಚೆಯುಳ್ಳ ಅರ್ಹ ಅಭ್ಯರ್ಥಿಗಳು ತಮ್ಮ ಸ್ವವಿವರವುಳ್ಳ ಅರ್ಜಿಯನ್ನು ಭಾವಚಿತ್ರ ಮತ್ತು ನಿಗದಿತ ದಾಖಲೆಗಳೊಂದಿಗೆ ಜೂ.29 ರೊಳಗೆ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಕೊಠಡಿ ಸಂಖ್ಯೆ-102, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು ಇಲ್ಲಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಅಧ್ಯಕ್ಷರಾದ ಪಿ.ಎನ್.ರವೀಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.