ಬೆಂಗಳೂರು : ವಿಶ್ವ ತಾಯಂದಿರ ದಿನ ಅಂಗವಾಗಿ ಮೆ.10 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್,ತಾಯಿಯೊಂದಿಗಿನ ಪೋಟೋ ಪೊಸ್ಟ್ ಮಾಡಿ Life doesn’t come with a manual—it comes with a mother.ಎಂದು ಟ್ವಿಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.
ಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮರ ಮಗನಾದ ರವಿ ಡಿ.ಚನ್ನಣ್ಣನವರ್ ಪೊಲೀಸ್ ಇಲಾಖೆಯಲ್ಲಿ ಜನಮನ್ನಣೆಗಳಿಸಿದ ಅಧಿಕಾರಿಯಾಗಿದ್ದಾರೆ.
ಕರ್ನಾಟಕದ ಸಿಂಗಂ ಎಂದೇ ಕರೆಯಲ್ಪಡುವ ರವಿ.ಡಿ.ಚನ್ನಣ್ಣನವರ್,ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳ ಸಂಘವಿದ್ದು,ಜನಪರ ಕಾರ್ಯದಲ್ಲಿ ತೊಡಗಿವೆ.ಮೆ.10ರಂದು ವಿಶ್ವ ತಾಯಂದಿರ ದಿನಕ್ಕೆ ಟ್ವಿಟ್ ಮೂಲಕ ಶುಭಾಶಯ ಕೋರಿದ್ದು,ಬಹಳಷ್ಟು ಮೆಚ್ಚಿಗೆ ಹಾಗೂ ಅಭಿಪ್ರಾಯಗಳು ಹರಿದು ಬಂದಿವೆ.