ದೊಡ್ಡಬಳ್ಳಾಪುರ : ದುಂಡು ಮುಖದ, ಬಟ್ಟಲುಗಣ್ಣಿನ ಚೆಲುವೆ ಭೂಮಿಕಾ ಚಾವ್ಲಾ ಭಾರತೀಯ ನಟಿ ಮತ್ತು ಮಾಜಿ ಮಾಡೆಲ್. ತೆಲುಗು ಚಿತ್ರ ಯುವಕುಡು ಚಿತ್ರಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ ಇಪ್ಪತ್ತು ವರ್ಷ.ಅಂದಿನಿಂದ ವಿವಿಧ ಭಾರತೀಯ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡಿದ್ದಾರೆ.
ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ, ಭೋಜ್‌ಪುರಿ ಮತ್ತು ಪಂಜಾಬಿ ಭಾಷೆಗಳಲ್ಲಿ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಚಿತ್ರ ರಸಿಕರ ಮನೆಗೆದ್ದವರು.
ತೆಲುಗಿನ ಪವನ್ ಕಲ್ಯಾಣ್ ಜೊತೆ ಖುಷಿ,ಮಹೇಶ್ ಬಾಬು ಜೊತೆ ಒಕ್ಕಡು ಹಾಗೂ ಎನ್‌ಟಿಆರ್ ಜೊತೆ ಸಿಂಹಾದ್ರಿ ಸಿನಿಮಾದಲ್ಲಿ ನಟಿಸುವ ಮೂಲಕ ಭೂಮಿಕಾ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದರು.
ನಂತರ ದಕ್ಷಿಣ ಭಾರತದ ಸಿನಿರಂಗದಲ್ಲಿ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದ್ದರೂ,ವಿವಾಹವಾದ ನಂತರ ಚಿತ್ರರಂಗದಿಂದ ದೂರವಾಗಿದ್ದ ಅವರು ಅಲ್ಲೊಂದು ಇಲ್ಲೊಂದು ಪಾತ್ರಗಳನ್ನು ಮಾತ್ರ ನಿರ್ವಹಿಸುತ್ತಿದ್ದಾರೆ.
ಆ.21.1978ರಲ್ಲಿ ದೆಹಲಿಯಲ್ಲಿ ಜನಸಿದ ಇವರಿಗೆ 41ವರ್ಷ.ಇವರ ಪೂರ್ಣ ಹೆಸರು ರಚನಾ ಚಾವ್ಲಾ,ಪತಿಯ ಹೆಸರು ಭರತ್ ಠಾಕೂರ್.