ದೊಡ್ಡಬಳ್ಳಾಪುರ : ತಾಲ್ಲೂಕಿನ ಕನಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರದ ಆದೇಶದಂತೆ ಮೇ.19 ರಿಂದ ಒಂದು ತಿಂಗಳ ಬದು ನಿರ್ಮಾಣ ಅಭಿಯಾನ ಮಾಸಾಚರಣೆಯನ್ನು ಪುಟ್ಟೇನಹಳ್ಳಿ ಗ್ರಾಮದ ಆರ್.ವಿ.ಗೌಡ ಎಂಬ ರೈತರ ಜಮೀನಿನಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದ ಶಾಸಕ ವೆಂಕಟರಮಣಯ್ಯ,ಮುಂಗಾರು ಮಳೆ ಪೂರ್ವದಲ್ಲಿ ನೆಲಕ್ಕೆ ಬಿದ್ದ ನೀರನ್ನು ಇಂಗಿಸಿಕೊಳ್ಳಲು ಹೊಲದಲ್ಲಿ ಬದು ನಿರ್ಮಾಣ ಮಾಸಾಚರಣೆ ಅಭಿಯಾನ ಸಹಕಾರಿಯಾಗಿದ್ದು ರೈತರು ಅಭಿಯಾನಕ್ಕೆ ಕೈಜೋಡಿಸಬೇಕಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಒಂದು ಎಕ್ಟೇರ್ ಜಮೀನಿನಲ್ಲಿ ಬದು ನಿರ್ಮಿಸಲು ಸುಮಾರು 43ಸಾವಿರ ಅನುಧಾನ ಪಡೆಯಬಹುದಾಗಿದೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯತಿ ಸದಸ್ಯ ಚುಂಚೇಗೌಡ,ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಯಾನಂದ ಸ್ವಾಮಿ, ತಾಪಂ ಇಒ ಮುರುಡಯ್ಯ,ಸದಸ್ಯೆ ಚನ್ನಮ್ಮ ರಾಮಲಿಂಗಯ್ಯ, ಕನಸವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮಣಿ,ಚೆನ್ನಾದೇವಿ ಅಗ್ರಹಾರ ಗ್ರಾಮ ಪಂಚಾಯತಿಯ ಅಧ್ಯಕ್ಷ ರಂಗನಾಥ್,ಸಹಾಯಕ ನಿರ್ದೇಶಕಿ ಗೀತಾಮಣಿ,ಕೃಷಿ ಅಧಿಕಾರಿಗಳಾದ ಹರೀಶ್ ಹಾಗೂ ನಾಗರಾಜ್, ಪಿಡಿಒಗಳಾದ ಸೂರ್ಯನಾರಾಯಣ ಸಿಂಗ್, ನಂದಕುಮಾರ್,ರಾಮಯ್ಯ,ತಿರುಪತಿ ಮತ್ತಿತರರಿದ್ದರು.