ದೊಡ್ಡಬಳ್ಳಾಪುರ : ಭಾರತದಲ್ಲಿ ಟ್ರೆಂಡ್ ಸೃಷ್ಟಿಸಿರುವ ಚೀನಾ ಮೂಲದ ಟಿಕ್ ಟಾಕ್ ಆಪ್‌ಗೆ ಭಾರತೀಯರು ಬಿಸಿ ಮುಟ್ಟಿಸಿದ್ದು,ಭಾರಿ ಪ್ರಮಾಣದಲ್ಲಿ ಆಪ್ ರೇಟಿಂಗ್ ಕುಸಿದು ಬಿದ್ದಿದೆ.
ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಉತ್ಪನ್ನಗಳನ್ನು ಬಳಸುವಂತೆ ಮನವಿ ಮಾಡಿದ್ದರು,ಇದರ ಪರಿಣಾಮ ನೇರವಾಗಿ ಚೀನಾ ಆಪ್ ಗಳ ಮೇಲೆ ಬಿದ್ದಿದೆ.
ಮಕ್ಕಳಿಂದಿಡಿದು ಇಳಿವಯಸಿನ ಅಜ್ಜ ಅಜ್ಜಿಯಂದಿರವರೆಗೂ ಹಾಟ್ ಫೇವರಿಟ್ ಆಗಿದ್ದ ಟಿಕ್‌ಟಾಕ್ ರೇಟಿಂಗ್ 4.6 ರಿಂದ 1.3ಕ್ಕೆ ಇಳಿದಿದೆ.
ಗಾಯದ ಮೇಲೆ ಬರೆ ಎಳೆದಂತೆ.ಮತ್ತೊಂದೆಡೆ ಫೈಜಲ್ ಸಿದ್ಧಿಕಿ ಎಂಬ ಬಳಕೆದಾರರು ಮಾಡಿದ ವಿಡಿಯೋ ಪೋಸ್ಟ್‌ನಿಂದ ವಿವಾದ ಸೃಷ್ಟಿಯಾಗಿದೆ.ರಾಷ್ಟ್ರೀಯ ಮಹಿಳಾ ಆಯೋಗ ಸಹ ಕೇಂದ್ರ ಸರಕಾರಕ್ಕೆ ಟಿಕ್‌ಟಾಕ್ ನಿಷೇಧಿಸುವಂತೆ ಮನವಿ ಮಾಡಿದೆ.
ಇದರ ಜೊತೆಗೆ ಟ್ವಿಟ್ಟರ್‌ನಲ್ಲಿ #tiktokexposed, #BanTikToklnlndia ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಸೃಷ್ಟಿಸಿದ್ದು,ದೇಶದಿಂದ ಕೆಲವೇ ದಿನಗಳಲ್ಲಿ ಕಣ್ಮರೆಯಾಗುವ ಸಾಧ್ಯತೆ ಹೆಚ್ಚಿದೆ.
ಒಟ್ಟಾರೆ ಕರೊನಾ ಸೋಂಕು ಚೀನಾ ಸೃಷ್ಟಿ ಎಂಬ ಆರೋಪದ ನಡುವೆ.ಭಾರತೀಯರು ಚೀನಾ ಮೂಲದ ಟಿಕಾ ಟಾಕ್ ರೇಟಿಂಗ್ ಇಳಿಸುವ ಮೂಲಕ,ಆಪ್ ಡಿಲೀಟ್ ಮಾಡುವ ಮೂಲಕ ಕೋಟ್ಯಂತರ ಆರ್ಥಿಕ ಹರಿವನ್ನು ತಡೆದು ಸರಿಯಾದ ಬಿಸಿ ಮುಟ್ಟಿಸುತ್ತಿದ್ದಾರೆ.
ವರದಿ #ಹರಿತಲೇಖನಿ