ದೊಡ್ಡಬಳ್ಳಾಪುರ : ಮಂಡ್ಯಾಗೆ ಕಾಡುತ್ತಿದ್ದ ಮಹಾರಾಷ್ಟ್ರದ ಕರೊನಾ ಸೋಂಕಿನ ಹಾವಳಿ,ದೊಡ್ಡಬಳ್ಳಾಪುರಕ್ಕು ಕಾಲಿಟ್ಟಿದೆ.
ತಾಲ್ಲೂಕಿನ ತಿಪ್ಪೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಹೊಸಹಳ್ಳಿ ತಾಂಡ್ಯ ಮೂಲದ 6 ಮಂದಿ ಕಾರ್ಮಿಕರು.ಮಹಾರಾಷ್ಟ್ರದಿಂದ ಬಂದಿದ್ದು,ಇವರಲ್ಲಿ ಮೂರು ಮಂದಿಗೆ ಕರೊನಾ ಸೋಂಕು ದೃಡಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ #ಹರಿತಲೇಖನಿಗೆ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮೂರು ಮಂದಿಗೆ ಸೋಂಕು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.ಸೋಂಕು ತಗುಲಿದ 3 ಮಂದಿ ಸೋಂಕಿತರನ್ನು ರಾಜೀವ್ ಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗೆ ಕಳಿಸಲಾಗಿದ್ದು,ಉಳಿದವರ ಫಲಿತಾಂಶ ಬರಬೇಕಿರುವ ಹಿನ್ನೆಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
” ಆರೋಗ್ಯ ಇಲಾಖೆ ಪಟ್ಟಿ ಬಿಡುಗಡೆ ”
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇಂದು ನಾಲ್ಕು ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಪಟ್ಟಿ ಬಿಡುಗಡೆ ಮಾಡಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಪಿ-1606 (ಮಹಿಳೆ) ಪಿ-1607 (ಮಹಿಳೆ) ಹಾಗೂ ಪಿ-1608 (ಮಹಿಳೆ), ಈ ಮೂವರು ವ್ಯಕ್ತಿಗಳು ಮಹಾರಾಷ್ಟ್ರ, ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಮತ್ತು ನೆಲಮಂಗಲ ತಾಲ್ಲೂಕಿನ ಪಿ-1686 (ಮಹಿಳೆ) ತೀವ್ರ ಉಸಿರಾಟದ ತೊಂದರೆಯುಳ್ಳವರಾಗಿದ್ದಾರೆ.
ನಾಲ್ಕು ಕೊರೋನಾ ಸೋಂಕಿತರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಳಿದಂತೆ ಇತ್ತಿಚೆಗೆ ಸೀಗೆಪಾಳ್ಯ ಗ್ರಾಮದ ಮೃತ ವ್ಯಕ್ತಿಯಲ್ಲಿ ಸೋಂಕುಪಡೆಯುತ್ತಿದ್ದಾರೆ.ದ್ದರಿಂದ,ಆತನ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಿದ್ದು.ಅವರ ತಪಾಸಣಾ ವರದಿಗಾಗಿ ಕಾಯಲಾಗುತ್ತಿದೆ.