ದೊಡ್ಡಬಳ್ಳಾಪುರ : ಶಿಕ್ಷಣ ಇಲಾಖೆ ಜುಲೈ.5 ರಂದು ನಡೆಸಲು ಉದ್ದೇಶಿಸಿದ್ದ #TET ಪರೀಕ್ಷೆಯನ್ನು ಜುಲೈ.12ಕ್ಕೆ ಮುಂದೂಡಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು,ರಾಜ್ಯದ ಶಿಕ್ಷಣ ಇಲಾಖೆ ನಡೆಸುವ #TET ಪರೀಕ್ಷೆಯ ದಿನಾಂಕ 5.7.2020, ಭಾನುವಾರ ಎಂದು ಘೋಷಿಸಲಾಗಿತ್ತು.
ಆದರೆ CTET ಪರೀಕ್ಷೆಯೂ ಅದೇ ದಿನ ನಡೆಯುವ ಅಂಶ ನಮ್ಮ ಗಮನಕ್ಕೆ ಬಂದ ಕಾರಣ,
ನಮ್ಮ #TET ಪರೀಕ್ಷೆ ಯನ್ನು 12.7.2020, ಭಾನುವಾರ ದಂದು ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಕರೊನಾ ಸೋಂಕು ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಇಡೀ ದೇಶ ಲಾಕ್ ಡೌನ್ ಮಾಡಿರುವ ಕಾರಣ 2020ರ ಏ.11 ರಂದು ನಿಗದಿಯಾಗಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ)ಯನ್ನು ಮುಂದೂಡಲಾಗಿತ್ತು.
(ಸಾಂದರ್ಭಿಕ ಚಿತ್ರ ಬಳಸಲಾಗಿದೆ)