ದೊಡ್ಡಬಳ್ಳಾಪುರ : ರಂಜಾನ್ ಹಬ್ಬದ ಪ್ರಯುಕ್ತ ಭಾನುವಾರ ಸಂಜೆ,ನಗರದ ಮುತ್ತೂರಿನ ಮುಸ್ಲಿಂ ಕುಟುಂಬಗಳಿಗೆ ಸುಮಾರು 300 ದಿನಸಿ ಕಿಟ್ ಗಳನ್ನು ಜೆಡಿಎಸ್ ಜಿಲ್ಲಾ ಅದ್ಯಕ್ಷ ಬಿ.ಮುನೇಗೌಡ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು,ರಂಜಾನ್ ಕಿಟ್ ವಿತರಿಸುವುದರಿಂದ ರಂಜಾನ್ ಉಪವಾಸ ಮಾಡಲು ಸಾಧ್ಯವಿಲ್ಲದವರೂ ಸಹ ಹಬ್ಬವನ್ನು ಆಚರಿಸಲು ಸಹಕರಿಸಿದಂತಾಗುತ್ತದೆ.ಅಲ್ಲದೆ,ಪವಿತ್ರ ರಂಜಾನ್ ಹಬ್ಬವನ್ನು ಎಲ್ಲರು ಸಮಾನ ಭಾವದಿಂದ ಆಚರಿಸಬೇಕೆಂಬ ಉದ್ದೇಶದಿಂದ ಕಿಟ್ ವಿತರಿಸಲಾಗುತ್ತದೆ ಎಂದರು.
ಈ ವೇಳೆ ಮುಖಡರಾದ ಮೂರ್ತಿ,ಅಲ್ಲಾಬಕಾಶ್, ಸರ್ದಾರ್,ಮಧು,ಅರ್ಜುನ್,ವಿನಯ್ ಕುಮಾರ್,ಭರತ್ ಮತ್ತಿತರಿದ್ದರು