ದೊಡ್ಡಬಳ್ಳಾಪುರ : ಕರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬವನ್ನು ತಾಲೂಕಿನಲ್ಲಿ ಸರಳವಾಗಿ ಆಚರಿಸಲಾಯಿತು.
ಮಸೀದಿಗಳಲ್ಲಿ ಹಾಗೂ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ನಿಷೇಧಿಸಿದ್ದ ಹಿನ್ನಲೆಯಲ್ಲಿ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿ, ಸಂಪ್ರದಾಯಗಳನ್ನು ಪಾಲಿಸಲಾಯಿತು.
ತಿಂಗಳಿಡೀ ರಂಜಾನ್ ಉಪವಾಸ ಆಚರಿಸುವ ಮುಸ್ಲಿಂ ಬಾಂಧವರು ಈದ್-ಉಲ್-ಫಿತಾರ್ ಆಚರಿಸಿ ಉಪವಾಸ ಅಂತ್ಯಗೊಳಿಸಿ, ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.