ದೊಡ್ಡಬಳ್ಳಾಪುರ : ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ 2020-21 ನೇ ಸಾಲಿನ 15ನೇ ಹಣಕಾಸಿನ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಡಿ.ಸಿ.ಶಶಿಧರ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.
ಈ ವೇಳೆ ಅಧ್ಯಕ್ಷ ಡಿ.ಸಿ.ಶಸಿಧರ್ ಮಾತನಾಡಿ,15ನೇ ಹಣಕಾಸಿನ ಅನುದಾನದಲ್ಲಿ ಕುಡಿಯುವ ನೀರು ಹಾಗೂ ನೈರ್ಮಲೀಕರಣಕ್ಕೆ ಬಳಸಲು ಸೂಚಿಸಿದರು.
ಸದಸ್ಯ ಶ್ರೀವತ್ಸ ಮಾತನಾಡಿ,ಕರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಮುಂದಾಗಿರುವುದು ಆತಂಕಕಾರಿ ಎಂದರು.
ಸದಸ್ಯ ಶಂಕರಪ್ಪ ಮಾತನಾಡಿ,ಕನಸವಾಡಿ ಹೋಬಳಿಯ ಕಮ್ಮಸಂದ್ರದಲ್ಲಿ ಶುದ್ದ ಕುಡಿಯುವ ನೀರಿನ ಘಟಕ ರಿಪೇರಿಗೆ ಬಂದಿದ್ದು ತ್ವರಿತವಾಗಿ ದುರಸ್ಥಿ ಮಾಡಿಸುವಂತೆ ಒತ್ತಾಯಿಸಿದರು.
ಈ ಕುರಿತಂತೆ ತಾಲೂಕಿನ ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ಥಿ ಕಾರ್ಯಕ್ಕೆ ಮುಂದಾಗುವಂತೆ,ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇಗೆ ತಾಪಂ ಅಧ್ಯಕ್ಷ ಶಶಿಧರ್ ಸೂಚಿಸಿದರು.
ಸದಸ್ಯ ಕಣಿವೇಪುರ ಸುನೀಲ್ ಕುಮಾರ್ ಮಾತನಾಡಿ,ಕರೊನಾ ಸೋಂಕು ನಿವಾರಣೆಗಾಗಿ ಶ್ರಮಿಸುತ್ತಿರುವ ತಾಲೂಕಿನ ಕರೋನಾ ವಾರಿಯರ್ಸ್‌ಗಳನ್ನು ತಾಲೂಕುಪಂಚಾಯಿತಿವತಿಯಿಂದ ಸನ್ಮಾನಿಸುವಂತೆ ಸೂಚಿಸಿದರು.
ಕಾರ್ಯನಿರ್ವಾಹಕ ಅಧಿಕಾರಿಗಳಾದ ಮುರುಡಯ್ಯ ಮಾತನಾಡಿ,೧೫ನೇ ಹಣಕಾಸಿನ ಕ್ರಿಯಾಯೋಜನೆಯನ್ನು plan plus ಎಂಬ ತಂತ್ರಾಂಶದಲ್ಲಿ ಅಪ್ಲೋಡ್ ಮಾಡಬೇಕು. ಹಾಗೂ ವೆಚ್ಚಗಳನ್ನು ನಿಯಮಾನುಸಾರ ಲೆಕ್ಕಪತ್ರ ನಿಯಮಗಳ ಪ್ರಕಾರ ದಾಖಲಿಸಿ PRIA
SOFTತಂತ್ರಾಂಶದ ಮುಖಾಂತರವೇ ಕಡ್ಡಾಯವಾಗಿ ಪಾವತಿಸಬೇಕು.15ನೇ ಹಣಕಾಸು ಆಯೋಗದ ಅನುದಾನದಲ್ಲಿ ಕೈಗೊಳ್ಳುವ ಎಲ್ಲ ಕಾಮಗಾರಿಗಳು ಸಾಮಾಜಿಕ ಲೆಕ್ಕಪರಿಶೋಧನೆ ಒಳಪಡುತ್ತವೆ ಎಂದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿಅಣ್ಣಯ್ಯಪ್ಪ,ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಚನ್ನಮ್ಮರಾಮಲಿಂಗಯ್ಯ,ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ಸಿ.ಗೀತಾ ಮಣಿ,ಎಓ ಮಂಜುನಾಥ,ತಾಲೂಕು ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಪಿ.ನಾರಾಯಣಸ್ವಾಮಿ ಸನ್ಮಾನ
ಈ ವೇಳೆ ಮೆ.೩೦ರಂದು ನಿವೃತ್ತಿ ಹೊಂದಲಿರುವ ಸಹಾಯಕ ಕೃಷಿ ನಿರ್ದೇಶಕ ಎಸ್.ಪಿ.ನಾರಾಯಣಸ್ವಾಮಿಯವರನ್ನು ತಾಲೂಕುಪಂಚಾಯಿತಿವತಿಯಿಂದ ಸನ್ಮಾನಿಸಲಾಯಿತು.