ದೊಡ್ಡಬಳ್ಳಾಪುರ : ಯಲಹಂಕ ಸೇತುವೆಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಸೇತುವೆ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ. ಹಿಂದು ಜಾಗರಣ ವೇದಿಕೆಯಿಂದ ವಾಹನ ಜಾಥಾ (ಬೈಕ್ ರ್ಯಾಲಿ) ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಸಂಯೋಜಕ್ ಶಿವಕುಮಾರ್ ತಿಳಿಸಿದ್ದಾರೆ.
ಜೂನ್ 1 ರಂದು ಬೆಳಗ್ಗೆ 9 ಗಂಟೆಗೆ
ನಗರದ ಖಾಸ್ ಬಾಗ್ ಸಮೀಪದಲ್ಲಿನ ರಾಮಣ್ಣ ಬಾವಿ ದೇವಸ್ಥಾನದಿಂದ ಜಾಥಾ ಆರಂಭವಾಗಲಿದ್ದು,ಯಲಹಂಕದ ಡೈರಿ ಸರ್ಕಲ್ ವರೆಗೂ ನಡೆಯಲಿದೆ.ಈ ವೇಳೆ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗುವುದು.
ಜಾಥಾದಲ್ಲಿ ಭಾಗವಹಿಸುವವರು ಕೇಸರಿ ಶಲ್ಯ,ಮುಖಗವಸು(ಮಾಸ್ಕ್) ಧರಿಸುವುದು ಕಡ್ಡಾಯ ಹಾಗೂ ಭಗವಧ್ವಜ.ತರುವುದು ಕಡ್ಡಾಯವೆಂದು ಮನವಿ ಮಾಡಿದ್ದಾರೆ.