ದೊಡ್ಡಬಳ್ಳಾಪುರ: ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎನ್.ನಾಗರಾಜ್ ಅವರನ್ನು ಅವಾಚ್ಚವಾಗಿ ನಿಂಧಿಸಿರುವ ಹಾಗೂ ಪ್ರಾಣಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಆರ್.ಆನಂದಮೂರ್ತಿ, ಎಲ್.ಕೆಂಪರಾಜ್ ಇವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಆರ್.ಆನಂದಮೂರ್ತಿ ಅವರು ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರಾಗಿದ್ದಾರೆ. ಆನಂದ್‌ಮೂರ್ತಿ ಅವರ ವಿರುದ್ದ ಟಿ.ಎನ್.ನಾಗರಾಜ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಗೂ ನಿಂದನೆ ದೂರು ನೀಡಿದ್ದಾರೆ.