ದೊಡ್ಡಬಳ್ಳಾಪುರ : ಕರೊನಾ ಸೋಂಕಿತ ಮೃತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಕಾರಣ ಕ್ವಾರಂಟೈನ್ ಒಳಗಾಗಿದ್ದ ಸಿಗೇಪಾಳ್ಯ14 ಮಂದಿಯ ತಪಾಸಣೆಯ ವರದಿಯಲ್ಲಿ ನೆಗೆಟಿವ್ ಬಂದಿದ್ದು,ಅಲ್ಲದೆ ಕ್ವಾರಂಟೈನ್ ಅವಧಿ ಮುಗಿದ ಕಾರಣ ಸಕ್ಕರೆಗೊಲ್ಲಹಳ್ಳಿ ಕ್ವಾರಂಟೈನ್ ಕೇಂದ್ರದಿಂದ ಮಂಗಳವಾರ ಮನೆಗೆ ಕಳಿಸಿ ಹೋಮ್ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹರಿತಲೇಖನಿಗೆ ತಿಳಿಸಿದ್ದಾರೆ.
ತಾಲೂಕಿನ ಹುಲುಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ,ಸೀಗೆಪಾಳ್ಯ ಗ್ರಾಮದ ಸುಮಾರು 60 ವರ್ಷದ ಕರೊನಾ ಸೋಂಕಿತನೊಂದಿಗೆ ಸಂಪರ್ಕದಲ್ಲಿದ್ದ.ಸೀಗೆಪಾಳ್ಯ ಹಾಗೂ ಬಂಡಪ್ಪನಪಾಳ್ಯದ 14 ಮಂದಿಯನ್ನು,ಸಕ್ಕರೆಗೊಲ್ಲಹಳ್ಳಿ ವಿದ್ಯಾರ್ಥಿ ನಿಲಯದಲ್ಲಿ 15 ದಿನಗಳ ಕ್ವಾರಂಟೈನ್ ಮಾಡಲಾಗಿತ್ತು.
ವರದಿಯಲ್ಲಿ ಕರೊನಾ ಲಕ್ಷಣ ಇಲ್ಲದಿರುವುದು ಹಾಗೂ 15 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಕಾರಣ ಮನೆಗೆ ಕಳಿಸಲಾಗಿದ್ದು.ಉಳಿದ 14ದಿನಗಳು ಕಡ್ಡಾಯವಾಗಿ ಹೊಮ್ ಕ್ವಾರಂಟೈನ್ ಒಳಪಡಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
” ಕ್ವಾರಂಟೈನ್ಗೆ ಕಾರಣ “
ಸೀಗೆಹಳ್ಳಿ ಮೂಲದ ಬೆಂಗಳೂರು ನಿವಾಸಿ ಸುಮಾರು 60 ವರ್ಷದ ವ್ಯಕ್ತಿ.ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರೋರ್ವರನ್ನು ನೋಡಲು ತೆರಳುವಾಗ ಸಾವನಪ್ಪಿದ್ದು,ತಪಾಸಣೆ ನಡೆಸಿದಾಗ ಆತನಲ್ಲಿ ಕರೊನಾ ಸೋಂಕು ದೃಡಪಟ್ಟಿತ್ತು.
ಆದರೆ ಆತ ಸಾಯುವ ಮುನ್ನ ಕೆಲ ದಿನಗಳ ಹಿಂದಷ್ಟೆ ಆತ ಸ್ವಗ್ರಾಮವಾದ ದೊಡ್ಡಬಳ್ಳಾಪುರ ತಾಲ್ಲೂಕಿನ ಸೀಗೆಹಳ್ಳಿಗೂ ಭೇಟಿ ನೀಡಿದ್ದು,ಈ ಹಿನ್ನೆಲೆಯಲ್ಲಿ ಆತನ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಒಳಪಡಿಸಲಾಗಿತ್ತು.
ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಶ್ಲಾಘನೆ
ಕಳೆದ 15ದಿನಗಳಿಂದ ಸೋಂಕು ಹರಡದಂತೆ ಶ್ರಮಿಸಿದ ಗ್ರಾಮ ಪಂಚಾಯತ್, ಕಂದಾಯ ಇಲಾಖೆ, ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾಪಂಚಾಯಿತಿ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಶ್ಲಾಘಿಸಿದ್ದಾರೆ.