ಧಾರವಾಡ : ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ,ಸತೀಶ್ ಜಾರಕಿಹೊಳಿ,ಸಲೀಂ ಅಹಮದ್ ಪದಗ್ರಹಣ ಕಾರ್ಯಕ್ರಮದ ಆಯೋಜನೆ ಹಿನ್ನೆಲೆ ಧಾರವಾಡದ ಪೂರ್ವ ವಿಧಾನ ಸಭಾ ಕ್ಷೇತ್ರವಾದ ಇಂದಿರಾನಗರದ ಕುರಿತು ಹುಬ್ಬಳ್ಳಿ ನಗರದ ಪ್ರವಾಸಿ ಮಂದಿರದಲ್ಲಿ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು,ಪದಗ್ರಹಣ ಸಮಾರಂಭದ ಯಶಸ್ವಿಯಾಗಿ ನಡೆಸುವ ಜವಬ್ದಾರಿ ನಮ್ಮೆಲ್ಲರ ಮೇಲಿದ್ದು,ಈ ಕಾರ್ಯಕ್ರಮ ಪಕ್ಷದ ಬಲವರ್ಧನೆಗೆ ಪ್ರಮುಖ ಪಾತ್ರವಹಸಿಸುವುದರಿಂದ ಪ್ರತಿಯೊಬ್ಬರೂ ಸಮರ್ಥವಾಗಿ ಕಾರ್ಯನಿರ್ವಹಸುವಂತೆ ಸಲಹೆ ನೀಡಿದರು.
ಈ ವೇಳೆ ಇಂದಿರಾ ನಗರ ಬ್ಲಾಕ್ ನ ಅಧ್ಯಕ್ಷ ದಶರತ್ ಮಾರುತಿ ವಾಲಿ,ಬೊಮ್ಮಪುರ ಬ್ಲಾಕ್ ನ ಅಧ್ಯಕ್ಷ ಮಹಮ್ಮದ್ ಕೋಳೂರ್ ಮತ್ತಿತರಿದ್ದರು.