ದೊಡ್ಡಬಳ್ಳಾಪುರ : ನಗರಸಭೆ ವ್ಯಾಪ್ತಿಯಲ್ಲಿನ ನಿವಾಸಿಗಳು ನೀರು ಮತ್ತು ಕಂದಾಯ ಕಟ್ಟಲು ನಗರಸಭೆ ಆವರಣದಲ್ಲಿ ಬಿಲಗ ಪಡೆಯಲು.ಕಾಯುವುದನ್ನು ತಪ್ಪಿಸಲು ನಗರಸಭೆವತಿಯಿಂದ ಸಾರ್ವಜನಿಕರ ಮನೆ ಬಾಗಿಲಿಗೆ ಬಿಲ್ ತಲುಪಿಸುವ ವಿನೂತನ ಪ್ರಯತ್ನಕ್ಕೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಚಾಲನೆ ನೀಡಿದ್ದಾರೆ.
ಶನಿವಾರ ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿರುವ ಅವರು,ಪ್ರತಿ ದಿನ ನಗರಸಭೆ ಆವರಣದಲ್ಲಿ ಕೆಲಸ ಕಾರ್ಯವನ್ನು ಬದಿಗೊತ್ತಿ ಕಂದಾಯ ಹಾಗೂ ನೀರಿನ ಬಿಲ್ ಕಟ್ಟಲು ಸಾಲುಗಟ್ಟಿ ನಿಲ್ಲಬೇಕಾದ ಅನಿರ್ವಾಯತೆ ಸಾರ್ವಜನಿಕರಿಗೆ ಉಂಟಾಗುತ್ತಿರುವುದನ್ನು ತಪ್ಪಿಸಲು,ನಗರಸಭೆ ವ್ಯಾಪ್ತಿಯ 31 ವಾರ್ಡ್ ಗಳಲ್ಲಿಮನೆ ಬಾಗಿಲಿಗೆ ಬಿಲ್ ತಲುಪಿಸುವ ಈ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಅಲ್ಲದೆ ಕರೊನಾ ಕಾರಣ ಜುಲೈ 31ರವರಗೆ 5%ವಿನಾಯಿತಿಯನ್ನು ವಿಸ್ತರಿಸಲಾಗಿದೆ ಎಂದರು.
ಈ ವೇಳೆ ಕಂದಾಯ ಅಧಿಕಾರಿ ವಿ.ಸತ್ಯನಾರಾಯಣ, ಕಂದಾಯ ನಿರೀಕ್ಷಕ ನಾರಾಯಣ್,ನಾರಾಯಣಸ್ವಾಮಿ,ಬಿಲ್ ಕಲೆಕ್ಟರ್ ಯಲ್ಲಪ್ಪ ಮತ್ತಿತರರು