ಬೆಂಗಳೂರು : ಉಸಿರಾಟದ ತೊಂದರೆ ಹಾಗೂ ಹೃದಯಾಘಾತದಿಂದ ಸಾವನಪ್ಪಿದ ಚಿರಂಜೀವಿ ಸರ್ಜಾದ ಪಾರ್ಥಿವ ಶರೀರದ ಗಂಟಲು ದ್ರವದ ಮಾದರಿಯನ್ನು ಕರೊನಾ ಟೆಸ್ಟ್ಗೆ ಒಳಪಡಿಸಲು ಆರೋಗ್ಯ ಇಲಾಖೆ ಸೂಚಿಸಿದೆ.
ಸ್ಯಾಂಡಲ್ವುಡ್ ನಟ, ಅರ್ಜುನ್ ಸರ್ಜಾ ಸೋದರ ಸಂಬಂಧಿ ಚಿರಂಜೀವಿ ಸರ್ಜಾ ಇಂದು ಮಧ್ಯಾಹ್ನ ಉಸಿರಾಟದ ತೊಂದರೆಯಿಂದಾಗಿ ಅವರನ್ನ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ 39 ವಯಸ್ಸಿನ ಚಿರಂಜೀವಿ, ಹೃದಯಾಘಾತದಿಂದ ನಿಧನರಾಗಿದ್ದರು.
ಚಿರಂಜೀವಿ ಸರ್ಜಾ ಅವರು ಕನ್ನಡದ ಹತ್ತು ಹಲವು ಸಿನಿಮಾಗಳಲ್ಲಿ ನಟಿಸಿದ್ದರು.ಚಿರು, ಸಿಂಗ,ಅಮ್ಮಾ ಐ ಲವ್ ಯೂ,ಆಟಗಾರ ಅವರ ನಟನೆಯ ಜನಪ್ರಿಯ ಸಿನಿಮಾಗಳು.
1980 ಅಕ್ಟೋಬರ್ 17ರಂದು ಬೆಂಗಳೂರಿನಲ್ಲಿ ಜನಿಸಿದ್ದ ಚಿರು,ಬೆಂಗಳೂರಿನ ಬಾಲ್ಡ್ವಿನ್ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ.ಬೆಂಗಳೂರಿನಲ್ಲಿರುವ ವಿಜಯ ಕಾಲೇಜ್ ನಲ್ಲಿ ಪದವಿ ಪಡೆದಿದ್ದರು.
2018 ಮೇ 3 ರಂದು ನಟಿ ಮೇಘನಾ ರಾಜ್ ಜೊತೆ ವಿವಾಹವಾಗಿದ್ದರು