ದೊಡ್ಡಬಳ್ಳಾಪುರ : ನಗರದ ಸೋಮೇಶ್ವರ ಬಡಾವಣೆಯಲ್ಲಿನ ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿರುವ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್ ನೇತೃತ್ವದ ಪೊಲೀಸರು,ಏಳು ಮಂದಿ ಜೂಜುಕೋರರನ್ನು ಬಂಧಿಸಿದ್ದಾರೆ.
ರೋಜಿಪುರದ ಡೆವಿಡ್(42),ಸಂದೀಪ್(39),ಶಾಂತಿನಗರದ ನರಸಿಂಹಮೂರ್ತಿ(47),ನಾಗರಾಜು(60),ಕುರುಬರಹಳ್ಳಿಯ ಮುತ್ತುರಾಜ್(40),ಶಿವಕುಮಾರ್(47),ಸೋಮೇಶ್ವರ ಬಡಾವಣೆಯ ಬಸವರಾಜ್(35) ಬಂಧಿತರು.
ಕಳೆದ ಹಲವು ದಿನಗಳಿಂದ ಈ ವ್ಯಾಪ್ತಿಯಲ್ಲಿ ಜೂಜಾಟ ನಡೆಯುತ್ತಿದ್ದ ಕುರಿತು ಮಾಹಿತಿ ದೊರಕಿದ್ದು.ಖಚಿತ ಮಾಹಿತಿಯ ಮೇಲೆ ಸೋಮವಾರ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹರಿತಲೇಖನಿಗೆ ತಿಳಿಸಿವೆ.