ದೊಡ್ಡಬಳ್ಳಾಪುರ: ಮುಸುಕಿನ ಜೋಳಕ್ಕೆ ಕಾಡುವ ಸೈನಿಕ ಹುಳು ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ರಾಜೇಶ್ವರಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು.ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ (ಎಮಾಮ್ಯಕ್ಟಿನ್ ಬೆಂಜಾಯಿಟ್)ಕೀಟನಾಶಕದ ದಾಸ್ತಾನು ಮಾಡಲಾಗಿದ್ದು ರಿಯಾಯಿತಿ ದರದಲ್ಲಿ ರೈತರು ಪಡೆಯಬಹುದಾಗಿದೆ ಎಂದಿದ್ದಾರೆ.
ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ರಾಗಿ ಮತ್ತು ಮುಸುಕಿನ ಜೋಳ ಮುಖ್ಯ ಬೆಳೆಗಳಾಗಿದ್ದು ಇತ್ತೀಚಿನ ದಿನಗಳಲ್ಲಿ ಸ್ಪೊಡಾಪ್ಟರಾ ಜಾತಿಗೆ ಸೇರಿದ (ಸ್ಪೊಡಾಪ್ಟರಾ ಸ್ರುಜಿಪರ್ಡಾ) ಸೈನಿಕ ಹುಳ ಬಾದೆಯು ಮುಸುಕಿನಜೋಳ ಬೆಳೆಯಲ್ಲಿ ಕಂಡುಬಂದಿರುತ್ತದೆ.ರೈತರು ಕೀಟನಾಶಕ ಸಿಂಪಡಿಸದೆ ಬೆಳೆಯುವ ಬೆಳೆಗೂ ಸಹ ಔಷಧಿ ಸಿಂಪಡಿಸುವ ಸಂದಿಗ್ದ ಪರಿಸ್ಥಿತಿ ಒದಗಿ ಬಂದಿದೆ.ರೈತ ಕೆಳಗೆ ತಿಳಿಸಿರುವ ವಿಷಯಗಳ ಕಡೆಗೆ ಗಮನ ಹರಿಸಿ ಸೈನಿಕ ಹುಳುವನ್ನು ಹತೋಟಿಗೆ ತರಬೇಕೆಂದು ತಮ್ಮಲ್ಲಿ ಕೋರಿದ್ದಾರೆ.
ಸಾಂದರ್ಭಿಕ ಶಿಫಾರಸ್ಸಿನಲ್ಲಿ ಈ ಕೆಳಗಿನ ಹತೋಟಿ ಕ್ರಮಗಳನ್ನು ಕೈಗೊಳ್ಳಬಹುದು.
1.ಮಾಗಿ ಉಳುಮೆ ಮಾಡುವುದು ಅಥವಾ ಆಳವಾದ ಉಳುಮೆ ಮಾಡುವುದರಿಂದ ಮೊಟ್ಟೆ ಅಥವಾ ತತ್ತಿಗಳನ್ನು ನಾಶಗೊಳಿಸಬಹುದು.
2.ಬೇವಿನ ಬೀಜದ ಕಷಾಯವನ್ನು ಶೇ.5 ರಂತೆ ಅಥವಾ ಬೇವಿನ ಮೂಲದ ಕೀಟನಾಶಕ ಅಜಡಿರೆಕ್ಟಿನ್ 1500ಪಿ.ಪಿ.ಎಂ. 5 ಮೀ. ಲೀ ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸುಳಿಯಲ್ಲಿ ಸಿಂಪರಣೆ ಮಾಡುವುದರಿಂದ ಮೊಟ್ಟೆ ಮತ್ತು ಮರಿಹುಳುಗಳನ್ನು ನಾಶಪಡಿಸಬಹುದು.
3.ಸ್ಪೈನೊಟರಮ್ 11.7 ಎಸ್.ಸಿ 0.5 ಮಿ.ಲೀ/ಲೀ. ನೀರಿಗೆ ಅಥವಾ ಕ್ಲೊರಾಂಟ್ರಿನೀಲಿಪ್ರೋಲ್ 18.5 ಎಸ್.ಸಿ 0.4 ಮಿ.ಲೀ ಅಥವಾ 0.4 ಗ್ರಾಂ ಎಮಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ. ಯನ್ನು ಒಂದು ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.
4.ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷಪ್ರಾಷಣದ ಬಳಕೆ: 10ಕೆ.ಜಿ. ಗೋದಿ ತೌಡು ಅಥವಾ ಅಕ್ಕಿತೌಡು (ಬೂಸ) 2 ಕೆ.ಜಿ ಬೆಲ್ಲಕ್ಕೆ ಬೇಕಾಗುವಷ್ಟು ತಕ್ಕಮಟ್ಟಿಗೆ ನೀರನ್ನು ಬೆರೆಸಿಟ್ಟು ಮಾರನೇ ದಿನ 100 ಗ್ರಾಂ ಥೈಯೋಡಿಕಾರ್ಬ್ ಪ್ರತಿ ಕೆ.ಜಿ. ಭತ್ತದ ತೌಡಿಗೆ 10 ಗ್ರಾಂ ನಂತೆ ಕೀಟನಾಶಕ ಮಿಶ್ರಣಮಾಡಿ ಬೆಳೆಯ ಸುಳಿಯಲ್ಲಿ ಉದುರಿಸುವುದು.
*******************